ಜಿಲ್ಲೆ

ತೋಳು ಕುಸ್ತಿಯಲ್ಲಿ ಸಾಧನೆ

ಸುನಿಲ್ ಪೊನ್ನೇಟಿ

ಕುಶಾಲನಗರ:

ಮೈಸೂರಿನ ಕುವೆಂಪು ನಗರದ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ಕರ್ನಾಟಕ ರಾಜ್ಯ ತೋಳು ಕುಸ್ತಿ ಪಂದ್ಯಾವಳಿಯಲ್ಲಿ ಕುಶಾಲನಗರದ ಹತ್ತನೇ ತರಗತಿ ಬಾಲಕ ಅದ್ವಿತೀಯ ಸಾಧನೆ ತೋರಿದ್ದಾನೆ.

ಬಾಲಕ ಆದಿಲ್ ಅರಫಾ 60 ಹಾಗೂ 65 ಕೆಜಿ ತೂಕದ ಪಂದ್ಯಾವಳಿಯಲ್ಲಿ ಮೊದಲ ಸ್ಥಾನ ಗಳಿಸಿದ್ದಾನೆ.

ಕೊಡಗು ಜಿಲ್ಲೆ ಸಿದ್ದಾಪುರದ ಇಕ್ರಾ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿರುವ ಬಾಲಕ ಆದಿಲ್ ಅರಫಾ ಕುಶಾಲನಗರದ ಪ್ರವಾಸೋದ್ಯಮಿ ಎಂ.ಎA. ದಾವುದ್ ಹಾಗೂ ಎಂ.ಬಿ. ಸೌಧ ದಂಪತಿ ಪುತ್ರ.