ಜಿಲ್ಲೆ

ಕಠಿಣ ಶಿಕ್ಷೆಯೇ ಪಾಠವಾಗಲಿ

Koppal

ಕುಷ್ಟಗಿ: ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಿದರೆ ಅಂತಹ ಪ್ರಕರಣಗಳು ಮರುಕಳಿಸುವುದಿಲ್ಲ. ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಅಪರಾಧಿಗಳಿಗೆ ವಿಧಿಸುವ ಶಿಕ್ಷೆ ಅತ್ಯಾಚಾರಿಗಳಿಗೆ ಪಾಠವಾಗಬೇಕು ಎಂದು ಪಟ್ಟಣದ ಯುವಕರು ಆಗ್ರಹಿಸಿದರು.

ದೇಶದ ವಿವಿಧೆಡೆ ನಡೆಯುತ್ತಿರುವ ಅತ್ಯಾಚಾರಗಳನ್ನು ಖಂಡಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶನಿವಾರ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಗ್ರೇಡ್ 2 ತಹಸೀಲ್ದಾರ್ ಮುರುಳಿಧರಗೆ ಸಲ್ಲಿಸಿದರು. ಎಂತಹ ಕೃತ್ಯ ಎಸಗಿದರೂ ದಂಡ ಹಾಗೂ ಕೆಲವು ವರ್ಷ ಜೈಲು ವಾಸ ಅನುಭವಿಸಿ ಹೊರಬರಬಹುದು ಎಂಬುದು ಅಪರಾಧಿಗಳ ಮನಸ್ಥಿತಿಯಾಗಿದೆ. ಕಾನೂನು ಕಠಿಣವಾದಷ್ಟು ಅನಾಚಾರ, ಅತ್ಯಾಚಾರ ಪ್ರಕರಣಗಳು ಕಡಿಮೆಯಾಗುತ್ತವೆ ಎಂದರು. ಶರಣು ನಾಯಕ್, ಸದ್ದಾಂ ಕಾಯಿಗಡ್ಡಿ, ವಿಜಯ್ ಪತ್ತಾರ, ಚಂದ್ರಶೇಖರ ಹನುಮಸಾಗರ, ಮುತ್ತುರಾಜ ಮಸ್ಕಿ ಇತರರು ಇದ್ದರು.