ಕುಷ್ಟಗಿ: ಪಟ್ಟಣದ ಮುಲ್ಲಾರ್ ಓಣಿಯ ಸರ್ಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಶಾಲೆಯ ಎಸ್ಡಿಎಂಸಿ ಸದಸ್ಯರು ‘ನಮ್ಮೂರ ಶಾಲೆ ನಮ್ಮ ಜವಾಬ್ದಾರಿ’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಶಾಲೆಯ ಅಭಿವೃದ್ಧಿಗೆ ಸರ್ಕಾರದೊಂದಿಗೆ ಕೈಜೋಡಿಸುವ ಉದ್ದೇಶ ಹೊಂದಿರುವ ಸದಸ್ಯರು, ಶಾಲೆಗೆ ಕುಡಿವ ನೀರಿನ ವ್ಯವಸ್ಥೆ, ಶೌಚಗೃಹ ನಿರ್ಮಾಣ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಲು ತೀರ್ಮಾನಿಸಿದ್ದಾರೆ. ಮಕ್ಕಳಿಗೆ ಐಡಿ ಕಾರ್ಡ್ ವಿತರಿಸುವ ಮೂಲಕ ಬುಧವಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಎಸ್ಡಿಎಂಸಿ ಅಧ್ಯಕ್ಷ ಪಾಶಾ ಹರ್ಲಾಪುರ, ಸದಸ್ಯರಾದ ಜಾವೀದ್ ಮಿಯಾ ಟಕ್ಕಳಕಿ, ಅಬ್ದುಲ್ ಸಮದ್ ಆದೋನಿ, ಗೌಸ್ ಮೈನುದ್ದೀನ್ ಕೊಪ್ಪಳ, ಖಾಜಾ ಬಂದೇನವಾಜ್ ಮದಲಗಟ್ಟಿ, ಮುಖ್ಯಶಿಕ್ಷಕಿ ರಿಹಾನಾ ಬೇಗಂ, ಯುವಕ ಮಂಡಳದ ಸಲೀಂ ಕಲಾಲಬಂಡಿ ಇದ್ದರು.