ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ಹಾಗೂ ಭೂ ಮಂಜೂರಾತಿ ನೀಡುವಂತೆ ಒತ್ತಾಯಿಸಿ ಬುದ್ದಂ, ಶರಣಂ ಗಚ್ಛಾಮಿ ಸೇವಾ ಟ್ರಸ್ಟ್ ಪದಾಧಿಕಾರಿಗಳು ಕುಷ್ಟಗಿ ತಹಸೀಲ್ದಾರ್ ಅಶೋಕ ಶಿಗ್ಗಾವಿಗೆ ಮನವಿ ಸಲ್ಲಿಸಿದರು. ಟ್ರಸ್ಟ್ ಅಧ್ಯಕ್ಷ ಯಮನೂರಪ್ಪ ಬಿಳೇಗುಡ್ಡ, ಕಾರ್ಯದರ್ಶಿ ರಾಜಾ ನಾಯಕ್ ಇತರರು ಇದ್ದರು.  
ಜಿಲ್ಲೆ

ಸಾಗುವಳಿದಾರರಿಗೆ ಭೂ ಮಂಜೂರಾತಿ ನೀಡಿ

ಕುಷ್ಟಗಿ: ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತ ಬಂದಿರುವ ರೈತ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಿ ಭೂ ಮಂಜೂರಾತಿ ನೀಡುವಂತೆ ಒತ್ತಾಯಿಸಿ ಬುದ್ದಂ ಶರಣಂ ಗಚ್ಛಾಮಿ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು ಮಂಗಳವಾರ ತಹಸೀಲ್ದಾರ್ ಅಶೋಕ ಶಿಗ್ಗಾವಿಗೆ ಮನವಿ ಸಲ್ಲಿಸಿದರು.

ತಾಲೂಕಿನ ತಾವರಗೇರಾ ಹೋಬಳಿಯ ಮೆತ್ತಿನಾಳ ಹಾಗೂ ಚಿಕ್ಕ ಮುಕರ್ತಿನಾಳ ಗ್ರಾಮದ ವಿವಿಧ ಸರ್ವೇ ನಂಬರ್‌ಗಳ ಸರ್ಕಾರಿ ಜಮೀನುಗಳಲ್ಲಿ ಭೂ ರಹಿತ ರೈತರು ಸಾಗುವಳಿ ಮಾಡುತ್ತ ಬಂದಿದ್ದಾರೆ. ಕಡು ಬಡತನದಲ್ಲಿರುವ ರೈತರು ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ಪರಿಗಣಿಸಿ ಸಾಗುವಳಿ ಚೀಟಿ ನೀಡಿ ಭೂ ಮಂಜೂರಾತಿ ನೀಡಿದರೆ ಜೀವನಕ್ಕೆ ಆಸರೆಯಾಗುತ್ತದೆ ಎಂದು ಮನವಿ ಮಾಡಿದರು. ಟ್ರಸ್ಟ್ ಅಧ್ಯಕ್ಷ ಯಮನೂರಪ್ಪ ಬಿಳೇಗುಡ್ಡ, ಕಾರ್ಯದರ್ಶಿ ರಾಜಾ ನಾಯಕ್, ಪ್ರಮುಖರಾದ ಹುಸೇನಪ್ಪ ಕಿನ್ನಾರಿ, ರಗಡಪ್ಪ ಮೇಣೆಧಾಳ, ಈರಪ್ಪ ಭಜಂತ್ರಿ, ಹನುಮಂತಪ್ಪ ಗುಳೇದ, ಮಂಜುನಾಥ ಕಲಾಲ್ ಇತರರು ಇದ್ದರು.