ಕುಷ್ಟಗಿ: ತಾಲೂಕಿನ ಕೆಲ ರೈತರ ಪಹಣಿಗಳಲ್ಲೂ ವಕ್ಫ್ ಆಸ್ತಿ ಎಂದು ನಮೂದಾಗಿದ್ದು, ವಕ್ಫ್ ಬೋರ್ಡ್ ನೀಡಿರುವ ನೋಟಿಸ್‌ಗೆ ಉತ್ತರಿಸಿ ಪ್ರಕರಣ ಮುಕ್ತಾಯಗೊಳಿಸುವಂತೆ ಕೋರಿರುವುದು ಬೆಳಕಿಗೆ ಬಂದಿದೆ. ತಾಲೂಕಿನ ಜಾಲಿಹಾಳ ಗ್ರಾಮದ ದೇವಪ್ಪ ಬೈಲಕೋರ್, ಬಸನಗೌಡ ದೊಡ್ಡಬಸಪ್ಪನವರ್ ಸೇರಿದಂತೆ ನೀರಲೂಟಿ ಇತರ ಗ್ರಾಮಗಳ ರೈತರ ಪಹಣಿಗಳ ಋಣಗಳು ಕಾಲಂನಲ್ಲಿ ವಕ್ಫ್ ಆಸ್ತಿಗಾಗಿ ಕಾಯ್ದಿರಿಸಲಾಗಿದೆ, ಸದರಿ ಜಮೀನು ವಕ್ಫ್ ಆಸ್ತಿಯಾಗಿರುತ್ತದೆ ಎಂದು ನಮೂದಿಸಲಾಗಿದೆ.
ವಕ್ಫ್ ಬೋರ್ಡ್ ವಿವಾದ ತಾಲೂಕಿಗೂ ವ್ಯಾಪಿಸುತ್ತಿದೆ. ವಿವಿಧ ಗ್ರಾಮಗಳ ರೈತರಿಗೆ ವಕ್ಫ್ ಬೋರ್ಡ್‌ನಿಂದ ನೋಟಿಸ್ ಜಾರಿಯಾಗಿವೆ. ರೈತರ ಪಹಣಿಯಲ್ಲಿ ನಮೂದಾಗಿರುವ ವಕ್ಫ್ ಬೋರ್ಡ್ ಹೆಸರು ತಗೆದು ಹಾಕಿ ಕೃಷಿಕರ ಆತಂಕ ದೂರ ಮಾಡಬೇಕು. ಈ ವಿಚಾರದಲ್ಲಿ ಸರ್ಕಾರ ಸ್ಪಷ್ಟ ನಿಲುವು ತಾಳಬೇಕಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಬದಾಮಿ ಇತರರು ಆಗ್ರಹಿಸಿದ್ದಾರೆ.