ಕುಷ್ಟಗಿ ತಾಪಂ ಕಚೇರಿ ವ್ಯವಸ್ಥಾಪಕ ಶಾಂತವೀರಯ್ಯಗೆ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತರ ವೇದಿಕೆ ಪದಾಧಿಕಾರಿಗಳು ಬುಧವಾರ ಮನವಿ ಸಲ್ಲಿಸಿದರು.  
ಜಿಲ್ಲೆ

ಜಲಜೀವನ್ ಕಾಮಗಾರಿ ಪರಿಶೀಲಿಸಲು ತಾಪಂ ಇಒ, ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆಗೆ ಮನವಿ

ಕುಷ್ಟಗಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೈಗೊಂಡಿರುವ ಜಲಜೀವನ್ ಮಿಷನ್ ಕಾಮಗಾರಿ ಪರಿಶೀಲಿಸುವಂತೆ ಒತ್ತಾಯಿಸಿ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತರ ವೇದಿಕೆ ಪದಾಧಿಕಾರಿಗಳು ತಾಪಂ ಇಒ ಹಾಗೂ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಗೆ ಬರೆದ ಪತ್ರವನ್ನು ಕಚೇರಿ ಸಿಬ್ಬಂದಿಗೆ ಬುಧವಾರ ಸಲ್ಲಿಸಿದರು.

ಕ್ರಿಯಾಯೋಜನೆಯಂತೆ ಕಾಮಗಾರಿ ಅನುಷ್ಠಾನಗೊಳಿಸುತ್ತಿಲ್ಲ. ಗುಣಮಟ್ಟದ ಪೈಪ್ ಬಳಸುತ್ತಿಲ್ಲ. ಪೈಪ್ ಅಳವಡಿಸಲು ನೆಲ ಅಗೆದು ಹಾಗೆಯೇ ಬಿಡಲಾಗಿದೆ. ಕೆಲವೆಡೆ ಸಿಸಿ ರಸ್ತೆ ಅಗೆದಿರುವುದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಸರ್ಕಾರದ ಮಾರ್ಗಸೂಚಿಯಂತೆ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಬೇಕು ಎಂದು ಆಗ್ರಹಿಸಿದರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಮರಿಗೌಡ ಬಾದರದಿನ್ನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಶ್ಯಾಡಲಗೇರಿ, ಸದಸ್ಯರಾದ ಧರ್ಮಣ್ಣ ಭಜಂತ್ರಿ, ಕುಮಾರಗೌಡ ಗೌಡ್ರ ಇತರರು ಇದ್ದರು.