ಕುಷ್ಟಗಿ ತಾಲೂಕು ಹಿರೇಮನ್ನಾಪುರದಲ್ಲಿ ಹುತಾತ್ಮ ಯೋಧ ಶರಣಪ್ಪ ಪ್ಯಾಟೆಪ್ಪ ಸೂಡಿ ಕಂಚಿನ ಪುತ್ಥಳಿ ಅನಾವರಣ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಂಸದ ಸಂಗಣ್ಣ ಕರಡಿ ಉದ್ಘಾಟಿಸಿದರು.  
ಜಿಲ್ಲೆ

ಯೋಧರು, ರೈತರನ್ನು ಸ್ಮರಿಸುವ ಕಾರ್ಯವಾಗಲಿ - ಸಂಸದ ಸಂಗಣ್ಣ ಕರಡಿ

ಕುಷ್ಟಗಿ: ಹುತಾತ್ಮ ಯೋಧರ ಕುಟುಂಬದ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಭಾವನೆ ಎಲ್ಲರಲ್ಲೂ ಬರಬೇಕಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ತಾಲೂಕಿನ ಹಿರೇಮನ್ನಾಪುರದಲ್ಲಿ ಹುತಾತ್ಮ ಯೋಧ ಶರಣಪ್ಪ ಸೂಡಿ ಕಂಚಿನ ಪುತ್ಥಳಿ ಅನಾವರಣಗೊಳಿಸಿ ಶುಕ್ರವಾರ ಮಾತನಾಡಿದರು. ಸೈನಿಕರು ಹಾಗೂ ರೈತರ ಸೇವೆ ಅವಿಸ್ಮರಣೀಯವಾಗಿದೆ. ಕುಟುಂಬದಿಂದ ದೂರವಿದ್ದು, ಚಳಿ, ಮಳೆ ಗಾಳಿ ಲೆಕ್ಕಿಸದೆ ದೇಶ ಕಾಯುವ ಕೆಲಸದಲ್ಲಿ ಹಲವಾರು ಯೋಧರು ಹುತಾತ್ಮರಾಗುತ್ತಾರೆ. ರೈತರದು ಕೂಡ ನಿಸ್ವಾರ್ಥ ಸೇವೆಯಾಗಿದೆ. ಸಮಾಜಕ್ಕೆ ಪ್ರೇರಣೆಯಾಗಿರುವ ಯೋಧರು ಹಾಗೂ ರೈತರನ್ನು ಸ್ಮರಿಸುವ ಕಾರ್ಯವಾಗಬೇಕಿದೆ. ಯುವಕರು ದೇಶ ಸೇವೆಗೆ ಮುಂದಾಗಬೇಕಿದೆ ಎಂದರು.

ಮದ್ದಾನೇಶ್ವರ ಮಠದ ಶ್ರೀ ಕರಿಬಸವ ಶಿವಾಚಾರ್ಯ ಸ್ವಾಮೀಜಿ, ಚಳಗೇರಿಯ ಶ್ರೀ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹುತಾತ್ಮ ಯೋಧ ಶರಣಪ್ಪ ಸೂಡಿ ಪತ್ನಿ ಗಿರಿಜಾ ಸೂಡಿ, ಪುತ್ರಿ ಸೃಷ್ಠಿ ಸೂಡಿ, ಮಾಜಿ ಶಾಸಕ ಕೆ.ಶರಣಪ್ಪ, ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ, ಪ್ರಮುಖರಾದ ವೀರೇಶಪ್ಪ ಸಾಹುಕಾರ, ಬಾಲಚಂದ್ರಪ್ಪಜ್ಜ ಬಳಿಗಾರ, ಕಳಕಪ್ಪ ಪುರದ್, ನಾಗರಾಜ ಜಿಗಜಿನ್ನಿ, ಶಿವಾನಂದ ಹಿರೇಮಠ, ಸಂಗಪ್ಪ ಕೊಡಗಲಿ, ಮಂಜುನಾಥ ಪುರದ್, ಶರಣು ಸೂಡಿ, ವಿಜಯ್ ಸೂಡಿ, ಮಾಜಿ ಸೈನಿಕರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.