ಕುಷ್ಟಗಿಯ ವಿವಿಧ ವಾರ್ಡ್‌ಗಳಿಗೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಸೋಮವಾರ ಭೇಟಿ ನೀಡಿ ಮೂಲ ಸೌಕರ್ಯ ಪರಿಶೀಲಿಸಿದರು. 
ಜಿಲ್ಲೆ

ವಾರ್ಡ್‌ಗಳಿಗೆ ಭೇಟಿ ನೀಡಿ ಮೂಲ ಸೌಕರ್ಯ ಪರಿಶೀಲಿಸಿದ ಶಾಸಕ

ಕುಷ್ಟಗಿ: ವಾರಕ್ಕೊಮ್ಮೆಯಾದರೂ ವಾರ್ಡ್‌ಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದರು.

ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಸೋಮವಾರ ಭೇಟಿ ನೀಡಿ ಮೂಲ ಸೌಕರ್ಯ ಪರಿಶೀಲಿಸಿ, ಬಹುತೇಕ ರಸ್ತೆಗಳ ಮಧ್ಯೆ ನಿರ್ಮಾಣಗೊಂಡಿರುವ ಗುಂಡಿಗಳನ್ನು ಮರಮ್ ಹಾಕಿ ಮುಚ್ಚಿಸಬೇಕು. ಮರಮ್ ಹಾಕಿಸಲು ಜಿಲ್ಲಾಧಿಕಾರಿ ಆದೇಶದಂತೆ ಒಂದು ವರ್ಷದ ಟೆಂಡರ್ ಕರೆಯಬೇಕು. ಹೂಳು ತುಂಬಿರುವ ಚರಂಡಿ ಸ್ವಚ್ಛಗೊಳಿಸಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಮೂಲ ಸೌಕರ್ಯಕ್ಕೆ ಸಂಬಂಧಿಸಿದಂತೆ ಆಯಾ ವಾರ್ಡ್ ಸದಸ್ಯರು ಮುತುವರ್ಜಿ ವಹಿಸಬೇಕು ಎಂದು ಹೇಳಿದರು.

ಪುರಸಭೆ ಅಧ್ಯಕ್ಷ ಗಂಗಾಧರ ಸ್ವಾಮಿ ಹಿರೇಮಠ, ಸದಸ್ಯರಾದ ಸೈಯದ್ ಮೈನುದ್ದೀನ್ ಮುಲ್ಲಾ, ರಾಜೇಶ ಪತ್ತಾರ, ಮುಖ್ಯಾಧಿಕಾರಿ ಅಶೋಕ ಪಾಟೀಲ್ ಇತರರು ಇದ್ದರು.