ಕುಷ್ಟಗಿಯ 3ನೇ ವಾರ್ಡ್‌ನಲ್ಲಿ ರಾಜಕಾಲುವೆ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿ ವಾರ್ಡ್‌ನ ರಹವಾಸಿಗಳ ಸಂಘದ ಪದಾಧಿಕಾರಿಗಳು ಲೋಕೋಪಯೋಗಿ ಇಲಾಖೆ ಎಇಇಗೆ ಬರೆದ ಪತ್ರವನ್ನು ಕಚೇರಿ ನೌಕರ ಮಾರುತಿಗೆ ಗುರುವಾರ ಸಲ್ಲಿಸಿದರು. ಸಂಘದ ಅಧ್ಯಕ್ಷ ಡಿ.ಬಿ.ಗಡೇದ್, ಪ್ರಧಾನ ಕಾರ್ಯದರ್ಶಿ ಎ.ವೈ.ಲೋಕರೆ, ಉಪಾಧ್ಯಕ್ಷ ಅಭಿನಂದನ್ ಗೋಗಿ ಇತರರು ಇದ್ದರು.  
ಜಿಲ್ಲೆ

ರಾಜಕಾಲುವೆ ಕಾಮಗಾರಿ ಆರಂಭಿಸಲು ಒತ್ತಾಯ

ಕುರುವತ್ತಿ ಶ್ರೀಕಾಂತಪ್ಪ

ಕುಷ್ಟಗಿ: ವಾರ್ಡ್‌ನಲ್ಲಿ ನನೆಗುದಿಗೆ ಬಿದ್ದಿರುವ ರಾಜಕಾಲುವೆ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿ ಪಟ್ಟಣದ 3ನೇ ವಾರ್ಡ್‌ನ ರಹವಾಸಿಗಳ ಸಂಘದ ಪದಾಧಿಕಾರಿಗಳು ಲೋಕೋಪಯೋಗಿ ಇಲಾಖೆ ಎಇಇಗೆ ಬರೆದ ಪತ್ರವನ್ನು ಕಚೇರಿ ನೌಕರ ಮಾರುತಿಗೆ ಗುರುವಾರ ಸಲ್ಲಿಸಿದರು.

ಕಾಮಗಾರಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆದೇಶ ನೀಡಿ 2ವರ್ಷ ಕಳೆದರೂ ಕೆಲಸ ಆರಂಭಿಸಿಲ್ಲ. ಇದರಿಂದ ಮಳೆ ಬಂದಾಗ ನೀರೆಲ್ಲ ಮನೆಗಳಿಗೆ ನುಗ್ಗುತ್ತಿದೆ. ದ್ರವತ್ಯಾಜ್ಯ ಹರಿದು ಸಾಗಲು ಮಾರ್ಗವಿಲ್ಲದಂತಾಗಿ ಅಲ್ಲಲ್ಲಿ ಮಡುಗಟ್ಟಿ ನಿಲ್ಲುತ್ತಿದೆ.

ಜತೆಗೆ ಸಂಚಾರಕ್ಕೂ ತೊಂದರೆಯಾಗಿ ನಿವಾಸಿಗಳು ಪರದಾಡುವಂತಾಗಿದೆ. ಕೂಡಲೇ ಕಾಮಗಾರಿ ಆರಂಭಿಸಿ ಎಂದು ಆಗ್ರಹಿಸಿದರು. ವಾರ್ಡ್‌ನ ರಹವಾಸಿಗಳ ಸಂಘದ ಅಧ್ಯಕ್ಷ ಡಿ.ಬಿ.ಗಡೇದ್, ಪ್ರಧಾನ ಕಾರ್ಯದರ್ಶಿ ಎ.ವೈ.ಲೋಕರೆ, ಉಪಾಧ್ಯಕ್ಷ ಅಭಿನಂದನ್ ಗೋಗಿ, ಕಾರ್ಯಕಾರಿ ಮಂಡಳಿ ಸದಸ್ಯ ಈಶಪ್ಪ ತಳವಾರ್, ಬಸವರಾಜ ಗಾಣಿಗೇರ, ಡಾ.ಬಾಬು ಇತರರು ಇದ್ದರು.