ಕುಷ್ಟಗಿಯ ಗ್ರಾಮದೇವತೆ ದ್ಯಾಮಮ್ಮ ದೇವಿ ಜಾತ್ರೆ ನಿಮಿತ್ತ ದೇಸಾಯಿ ಮನೆತನದ ವೆಂಕಪ್ಪಯ್ಯ ರಾಮಪ್ಪಯ್ಯ ದೇಸಾಯಿ ಅವರನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತರಲಾಯಿತು. ಜಾತ್ರಾ ಸಮಿತಿ ಅಧ್ಯಕ್ಷ ರವಿಕುಮಾರ ಸ್ವಾಮಿ ಹಿರೇಮಠ, ಗೌರವ ಅಧ್ಯಕ್ಷ ಗುರುರಾಜಪ್ಪಯ್ಯ ದೇಸಾಯಿ, ಪ್ರಮುಖರಾದ ವಿಜಯಕುಮಾರ್ ಹಿರೇಮಠ, ಈರಣ್ಣ ಸೊಬರದ್, ಕಲ್ಲೇಶ ತಾಳದ್ ಇತರರಿದ್ದರು.  
ಜಿಲ್ಲೆ

ದ್ಯಾಮಮ್ಮ ದೇವಿ ಮೆರವಣಿಗೆ ಅದ್ದೂರಿ

ಕುಷ್ಟಗಿ: ಪಟ್ಟಣದ ಗ್ರಾಮದೇವತೆ ದ್ಯಾಮಮ್ಮ ದೇವಿ ಜಾತ್ರೆ ನಿಮಿತ್ತ ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.

ಬೆಳಗ್ಗೆ ಸಂಪ್ರದಾಯದಂತೆ ದೇಸಾಯಿ ಮನೆತನದ ವೆಂಕಪ್ಪಯ್ಯ ರಾಮಪ್ಪಯ್ಯ ದೇಸಾಯಿ ಅವರನ್ನು ಅವರ ಮನೆಯಿಂದ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತಂದು ದೇವಿಗೆ ಪೂಜೆ ನೆರವೇರಿಸಲಾಯಿತು. ನಂತರ ದೇವಿ ಮೂರ್ತಿಯನ್ನು ಸಕಲ ವಾದ್ಯ ವೃಂದದೊಂದಿಗೆ ಮೆರವಣಿಗೆ ಮೂಲಕ ಗಂಗಾಸ್ನಾನಕ್ಕೆ ಕರೆತರಲಾಯಿತು.

ಗಂಗಾ ಸ್ನಾನ ನಂತರ ದೇವಿಯ ಪುರ ಪ್ರವೇಶ ಹಾಗೂ ಉಡಿ ತುಂಬುವ ಕಾರ್ಯ ಜರುಗಿತು. ವಿವಿಧ ಮನೆತನದವರ ಮನೆಯಲ್ಲಿ ಪೂಜಾ ಕಾರ್ಯ ನೆರವೇರಿಸಿದ ನಂತರ ದೇವಿ ಮೆರವಣಿಗೆ ದ್ಯಾಮಮ್ಮನ ಕಟ್ಟೆ ತಲುಪಿತು. ಪಟ್ಟಣದ ವಿವಿಧ ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.