ಕುಷ್ಟಗಿ: ಪಟ್ಟಣದ ತಹಸಿಲ್ ಕಚೇರಿ ರಸ್ತೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯ ಚೀಲಗಳನ್ನು ಕಂದಾಯ ಅಧಿಕಾರಿಗಳು ಇತ್ತೀಚೆಗೆ ಜಪ್ತಿ ಮಾಡಿಕೊಂಡಿದ್ದಾರೆ.
ಅನುಮಾನಾಸ್ಪದವಾಗಿ ಹೊರಟಿದ್ದ ಗೂಡ್ಸ್ ವಾಹನ ಬೆನ್ನಟ್ಟಿ ತಡೆದಾಗ ಅನ್ನಭಾಗ್ಯ ಯೋಜನೆ ಅಕ್ಕಿ ಚೀಲಗಳು ಪತ್ತೆಯಾದವು. ಅಕ್ಕಿ ಸಮೇತ ವಾಹನವನ್ನು ಪೊಲೀಸರ ವಶಕ್ಕೆ ನೀಡಲಾಗಿದೆ.
ಒಟ್ಟು 60 ಪ್ಲಾಸ್ಟಿಕ್ ಚೀಲಗಳಲ್ಲಿ 21 ಕ್ವಿಂಟಾಲ್ ಅಕ್ಕಿಯನ್ನು ಸಾಗಣೆ ಮಾಡಲಾಗುತ್ತಿತ್ತು. ಈ ಸಂಬಂಧ ಪಟ್ಟಣ ಠಾಣೆಗೆ ದೂರು ನೀಡಲಾಗಿ ಎಂದು ಆಹಾರ ನಿರೀಕ್ಷಕ ರಮೇಶ ತಾಳಕೇರಿ ತಿಳಿಸಿದ್ದಾರೆ.