ಕುಷ್ಟಗಿಯ 8ನೇ ವಾರ್ಡ್‌ನ ಆಶ್ರಯ ಕಾಲನಿಯಲ್ಲಿ ನಿವೇಶನ ವಿನ್ಯಾಸ ರಚನೆಗೆ ಅವಕಾಶ ನೀಡದಂತೆ ವಾರ್ಡ್‌ನ ಸದಸ್ಯರು ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠಗೆ ಸಲ್ಲಿಸಿದರು. 
ಜಿಲ್ಲೆ

ನಿವೇಶನ ರಚನೆಗೆ ಅವಕಾಶ ನೀಡದಿರಲು ಒತ್ತಾಯ

Koppal

ಕುಷ್ಟಗಿ: ಪಟ್ಟಣದ 8ನೇ ವಾರ್ಡ್‌ನ ಆಶ್ರಯ ಕಾಲನಿಯಲ್ಲಿ ನಿವೇಶನ ರಚನೆಗೆ ಅವಕಾಶ ನೀಡದಂತೆ ವಾರ್ಡ್‌ನ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿಗೆ ಬರೆದ ಪತ್ರವನ್ನು ಅಧ್ಯಕ್ಷ ಜಿ.ಕೆ.ಹಿರೇಮಠಗೆ ಸೋಮವಾರ ಸಲ್ಲಿಸಿದರು.

ಕಾಲನಿಯ ನಿವಾಸಿಗಳಿಗೆ 1998-96ಸಾಲಿನಲ್ಲಿ ಹಕ್ಕುಪತ್ರ ನೀಡಲಾಗಿದೆ. ಬಡಜನರಿಗೆ ಹಂಚಿಕೆ ಮಾಡಲಾದ ನಿವೇಶನಗಳನ್ನು ಒತ್ತೂವರಿ ಮಾಡಿಕೊಂಡು ವ್ಯಕ್ತಿಯೊಬ್ಬರು ನಿವೇಶನಗಳ ವಿನ್ಯಾಸ ರಚನೆಗೆ ಮುಂದಾಗಿದ್ದಾರೆ. ವಿನ್ಯಾಸ ರಚನೆಗೆ ಅವಕಾಶ ನೀಡಬಾರದು. ಜತೆಗೆ ಕಾಲನಿಯ ಹದ್ದುಬಸ್ತು ಮಾಡಿಕೊಡುವಂತೆ ತಹಸೀಲ್ದಾರರಿಗೆ ಪತ್ರ ಬರೆಯುವಂತೆ ವಾರ್ಡ್‌ನ ಸದಸ್ಯ ಸೈಯದ್ ಮೈನುದ್ದೀನ್ ಮುಲ್ಲಾ, ನಿವಾಸಿಗಳಾದ ದೇವಮ್ಮ ಕಡಿವಾಲ, ಯಲ್ಲಮ್ಮ ಸಂಗಟಿ, ನಿಂಬಮ್ಮ ಹಿರೇಮಠ, ಹನುಮಪ್ಪ ಪೂಜಾರಿ ಇತರರು ಒತ್ತಾಯಿಸಿದ್ದಾರೆ.