ಕುಷ್ಟಗಿ ತಾಲೂಕಿನ ಹೊಮ್ಮಿನಾಳ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಗುರುವಂದನೆ ಹಾಗೂ ಹಳೇ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಿಮಿತ್ತ ಏರ್ಪಡಿಸಿದ್ದ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಹಳೇ ವಿದ್ಯಾರ್ಥಿಗಳು ಪ್ರಶಸ್ತಿ ಪತ್ರ ನೀಡಿದರು. ವೀರೇಶ ಯಡ್ಡೋಣಿ, ಹನುಮಂತ ಕಲಬಾವಿ, ಈಶಪ್ಪ ಜಾಲಾಪುರ, ಮಂಜುನಾಥ ವಸಂತಲಕ್ಷ್ಮೀ ಇತರರಿದ್ದರು.  
ಜಿಲ್ಲೆ

ದ್ವಿತೀಯ ಸ್ಥಾನ ಪಡೆದ ಕೊಪ್ಪಳ ತಂಡ

ಕುಷ್ಟಗಿ: ತಾಲೂಕಿನ ಹೊಮ್ಮಿನಾಳ ಸಹಿಪ್ರಾ ಶಾಲೆ ಹಳೆಯ ವಿದ್ಯಾರ್ಥಿಗಳು ಸಂಘ ರಚನೆ, ಪದಾಧಿಕಾರಿಗಳ ಪದಗ್ರಹಣ ಹಾಗೂ ಗುರುವಂದನೆ ಕಾರ್ಯಕ್ರಮ ನಿಮಿತ್ತ ಈಚೆಗೆ ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಿದ್ದರು.

ಕೊಪ್ಪಳ, ಧಾರವಾಡ, ವಿಜಯಪುರ, ಕಲಬುರಗಿ, ಗದಗ ಸೇರಿ ರಾಜ್ಯದ ವಿವಿಧ 16 ತಂಡಗಳು ಭಾಗವಹಿಸಿದ್ದವು. ವಿಜಯಪುರದ ಕರ್ಣ ತಂಡ ಪ್ರಥಮ ಸ್ಥಾನ, ಕೊಪ್ಪಳದ ಎಸ್.3 ತಂಡ ದ್ವಿತೀಯ, ಧಾರವಾಡದ ಅರವಿಂದ ಘೋಷ್ ತಂಡ ತೃತೀಯ ಸ್ಥಾನ ಪಡೆಯಿತು. ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳ ಸಂಪನ್ಮೂಲ ವ್ಯಕ್ತಿಗಳಿಂದ ಪ್ರಶ್ನೆ ಪತ್ರಿಕೆ ತಯಾರಿಸಿ ಸ್ಪರ್ಧೆ ಏರ್ಪಡಿಸಲಾಗಿತ್ತು.

ವಿಜೇತ ತಂಡಗಳಿಗೆ ಪ್ರಶಸ್ತಿ ಪತ್ರ ನೀಡಲಾತು ಎಂದು ಹಳೇ ವಿದ್ಯಾರ್ಥಿಗಳಾದ ವೀರೇಶ ಯಡ್ಡೋಣಿ, ಹನುಮಂತ ಕಲಬಾವಿ, ಈಶಪ್ಪ ಜಾಲಾಪುರ, ಮಂಜುನಾಥ ವಸಂತಲಕ್ಷ್ಮೀ ಇತರರು ತಿಳಿಸಿದರು.