ಕುಷ್ಟಗಿ: ಹಳ್ಳಿಗಳ ಪ್ರತಿ ಮನೆಗೆ ಕುಡಿವ ನೀರು ಪೂರೈಸುವ ಉದ್ದೇಶದಿಂದ ಜೆಜೆಎಂ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಾಪಂ ಇಒ ಶಿವಪ್ಪ ಸುಬೇದಾರ್ ಹೇಳಿದರು.
ಸಂಗನಾಳ ಗ್ರಾಪಂ ವ್ಯಾಪ್ತಿಯ ಹಡಗಲಿ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿದರು. ಯೋಜನೆ ಕುರಿತು ಗ್ರಾಮ ಸಭೆಗಳ ಮುಖಾಂತರ ಜನರಿಗೆ ಮಾಹಿತಿ ನೀಡಲಾಗುತ್ತಿದೆ. ಸದ್ಯ ಪ್ರಗತಿಯಲ್ಲಿರುವ ಕಾಮಗಾರಿ ಶೀಘ್ರ ಪೂರ್ಣಗೊಂಡು ಪ್ರತಿ ಮನೆಗೂ ನೀರು ಪೂರೈಕೆಯಾಗಲಿದೆ. ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸಾರ್ವಜನಿಕರೂ ಕೈಜೋಡಿಸಬೇಕಿದೆ. ಹಡಗಲಿ ಗ್ರಾಮವನ್ನು ಹರ್ ಘರ್ ಜಲ್ ಗ್ರಾಮವನ್ನಾಗಿ ಘೋಷಿಸಲಾಗಿದೆ ಎಂದು ತಿಳಿಸಿದರು. ಗ್ರಾಪಂ ಅಧ್ಯಕ್ಷೆ ಅಮೃತಮ್ಮ ಮಲ್ಲಪ್ಪ, ಪಿಡಿಒ ಗುರಪ್ಪ ನಾಯಕ್, ಇಂಜಿನಿಯರ್ ವಿನಾಯಕ್ ಇದ್ದರು.