ಕುಷ್ಟಗಿ ತಾಪಂ ಕಚೇರಿ ಎದುರು ಮಂಗಳವಾರ ತಾಲೂಕು ಅಂಗವಿಕಲರ ಮತ್ತು ಪಾಲಕರ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಆರ್.ಕೆ.ದೇಸಾಯಿ, ಒಕ್ಕೂಟದ ತಾಲೂಕು ಸಮಿತಿಯ ಸಂಚಾಲಕ ಬಸವರಾಜ ಮೇಳಿ, ಪದಾಧಿಕಾರಿಗಳಾದ ರಾಮಣ್ಣ ರಾಠೋಡ್ ಇತರರು ಇದ್ದರು. 
ಜಿಲ್ಲೆ

ಅಂಗವಿಕಲರ ಅನುದಾನ ಅನ್ಯ ಕಾರ್ಯಗಳಿಗೆ ಬಳಸದಿರಿ

ಪ್ರವೀಣ ಉದುಸಾ ದಲಬಂಜನ್

ಕುಷ್ಟಗಿ: ಅಂಗವಿಕಲರಿಗೆ ಸಾಮರ್ಥ್ಯಕ್ಕೆ ತಕ್ಕಂತೆ ನರೇಗಾದಡಿಯಲ್ಲಿ ಕೂಲಿ ದಿನಗಳನ್ನು ನೀಡಲು ಆಗ್ರಹಿಸಿ ಅಂಗವಿಕಲರ ಮತ್ತು ಪಾಲಕರ ಒಕ್ಕೂಟದ ತಾಲೂಕು ಘಟಕದ ಪದಾಧಿಕಾರಿಗಳು ಪಟ್ಟಣದ ತಾಪಂ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ, ತಾಪಂ ಇಒ ಪಂಪಾಪತಿಗೆ ಮನವಿ ಸಲ್ಲಿಸಿದರು.

ನರೇಗಾ ಯೋಜನೆಯಡಿ ಅಂಗವಿಕಲರಿಗೆ ವಿಶೇಷ ಉದ್ಯೋಗ ಚೀಟಿ ನೀಡಿ, ಸಾಮರ್ಥ್ಯಕ್ಕೆ ತಕ್ಕಂತೆ 100 ದಿನ ಕೆಲಸ ನೀಡಬೇಕು. ಗ್ರಾಪಂಗಳಲ್ಲಿ ಮೀಸಲಿರುವ ಶೇ.5 ಅನುದಾನವನ್ನು ಅನ್ಯ ಕಾರ್ಯಗಳಿಗೆ ಬಳಸದೆ ಅಂಗವಿಕಲರ ಕಲ್ಯಾಣಕ್ಕೆ ಮಾತ್ರ ಬಳಸಬೇಕು. ಅಂಗವಿಕಲರ ಪುನರ್ವಸತಿ ಕಾರ್ಯಕರ್ತರಿಗೆ ಕನಿಷ್ಠ ವೇತನ ಜಾರಿ ಮಾಡಬೇಕು. ಅಂಗವಿಕಲರನ್ನು ಮದುವೆಯಾಗುವವರಿಗೆ 3 ಲಕ್ಷ ರೂ. ಹಾಗೂ ಪರಸ್ಪರ ಅಂಗವಿಕಲರು ವಿವಾಹವಾದಲ್ಲಿ 6 ಲಕ್ಷ ರೂ.ಗಳ ಪ್ರೋತ್ಸಾಹ ಧನ ನೀಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಆರ್.ಕೆ.ದೇಸಾಯಿ, ಒಕ್ಕೂಟದ ತಾಲೂಕು ಸಮಿತಿಯ ಸಂಚಾಲಕ ಬಸವರಾಜ ಮೇಳಿ, ಪದಾಧಿಕಾರಿಗಳಾದ ರಾಮಣ್ಣ ರಾಠೋಡ್, ಬಸವರಾಜ ಗೋನಾಳ, ಯಲ್ಲಪ್ಪ ವಡ್ಡರಹಟ್ಟಿ, ಲಕ್ಷ್ಮಣ ಹನುಮನಾಳ, ಕರಿಯಪ್ಪ ಸಿಂಗನಾಳ, ರಂಗಪ್ಪ ದಾಸರ್, ಅಮರೇಗೌಡ ಬಳೂಟಗಿ ಇತರರಿದ್ದರು.