ಕೆ.ಬೋದೂರು ತಾಂಡಾದ ಜೆಜೆಎಂ ಕಾಮಗಾರಿಯನ್ನು ಜಿಪಂ ಉಪಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ ಪರಿಶೀಲಿಸಿದರು. ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ ಇತರರಿದ್ದರು. 
ಜಿಲ್ಲೆ

ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿ

ಕುಷ್ಟಗಿ: ತಾಲೂಕಿನ ಕೆ.ಹೊಸೂರು ಹಾಗೂ ಬೋದೂರು ತಾಂಡಾಕ್ಕೆ ಜಿಪಂ ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ ಗುರುವಾರ ಭೇಟಿ ನೀಡಿ ಪ್ರಗತಿ ಹಂತದ ಕಾಮಗಾರಿಗಳನ್ನು ಪರಿಶೀಲಿಸಿದರು.

ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಿ

ಕೆ.ಹೊಸೂರಿನಲ್ಲಿ ನರೇಗಾ ಯೋಜನೆಯಡಿ ಪ್ರಗತಿ ಹಂತದಲ್ಲಿರುವ ಎನ್‌ಆರ್‌ಎಲ್‌ಎಂ ಶೆಡ್, ಅಂಗನವಾಡಿ ಕೇಂದ್ರ, ಸ್ಮಶಾನ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು. ಕೆ.ಬೋದೂರು ತಾಂಡಾದಲ್ಲಿ ಜೆಜೆಎಂ ಕಾಮಗಾರಿ ಹಾಗೂ ಶೌಚಗೃಹ ನಿರ್ಮಾಣ ಕಾಮಗಾರಿ ಪರಿಶೀಲಿಸಿ ಗುಣಮಟ್ಟದೊಂದಿಗೆ ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ ಅಧಿಕಾರಿಗಳಿಗೆ ಸೂಚಿಸಿದರು.
ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ, ಅರಣ್ಯ ಇಲಾಖೆಯ ಆರ್‌ಎಫ್‌ಒ ಸತೀಶ್, ಗ್ರಾಪಂ ಪಿಡಿಒ ಆನಂದರಾವ್ ಕುಲಕರ್ಣಿ, ತಾಪಂ ತಾಂತ್ರಿಕ ಸಂಯೋಜಕ ಬಸವರಾಜ ಇತರರು ಇದ್ದರು.