ನಾಗರಾಳ ಗ್ರಾಮದ ರಸ್ತೆಯಲ್ಲಿ ಮಡುಗಟ್ಟಿ ನಿಂತ ದ್ರವತ್ಯಾಜ್ಯವನ್ನು ಕಾರ್ಮಿಕರು ಶುಕ್ರವಾರ ತೆರವುಗೊಳಿಸುತ್ತಿರುವುದು. 
ಜಿಲ್ಲೆ

ನಾಗರಾಳ ಗ್ರಾಮದಲ್ಲಿ ತ್ಯಾಜ್ಯ ತೆರವಿಗೆ ಮುಂದಾದ ಗ್ರಾಪಂ

Koppal

ಕುಷ್ಟಗಿ: ಗುಮಗೇರಾ ಗ್ರಾಪಂ ವ್ಯಾಪ್ತಿಯ ನಾಗರಾಳ ಗ್ರಾಮದಲ್ಲಿ ಸಚ್ಛತಾ ಕಾರ್ಯ ಭರದಿಂದ ಸಾಗಿದೆ. ವಿವಿಧ ರಸ್ತೆಗಳಲ್ಲಿ ಮಡುಗಟ್ಟಿ ನಿಂತಿದ್ದ ದ್ರವತ್ಯಾಜ್ಯ ತೆರವಿಗೆ ಗ್ರಾಪಂ ಮುಂದಾಗಿದೆ. ಗ್ರಾಮದ ಶಾಲೆ, ವಿವಿಧ ದೇವಸ್ಥಾನಗಳಿಗೆ ತೆರಳುವ ರಸ್ತೆಯಲ್ಲಿ ಕೊಳಚೆ ನೀರು ಸಂಗ್ರಹಗೊಂಡು ಹಸಿರು ಬಣ್ಣಕ್ಕೆ ತಿರುಗಿತ್ತು. ಸಾಂಕ್ರಾಮಿಕ ರೋಗ ಭೀತಿಯ ಜತೆಗೆ ಗ್ರಾಮಸ್ಥರ ಓಡಾಟಕ್ಕೂ ತೊಂದರೆಯಾಗಿತ್ತು. ಈ ಕುರಿತು ನ.17ರಂದು ‘ನಾಗರಾಳ ಗ್ರಾಮದಲ್ಲಿ ನೈರ್ಮಲ್ಯ ಕೊರತೆ’ ಶೀರ್ಷಿಕೆ ಅಡಿ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಗ್ರಾಪಂ ಆಡಳಿತ ಶುಕ್ರವಾರ ಸ್ವಚ್ಛತೆಗೆ ಕ್ರಮಕೈಗೊಂಡಿದೆ. ವಿಜಯವಾಣಿ ಪತ್ರಿಕೆಯ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.