ಕುಷ್ಟಗಿ: ತಾಲೂಕಿನ ಕೊರಡಕೇರಾ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಜಾತ್ರೋತ್ಸವ ಸಂಭ್ರಮದಿಂದ ಜರುಗಿತು. 15 ದಿನಗಳ ಕಾಲ ನಡೆದ ಸಜ್ಜಲಗುಡ್ಡದ ಶಿವಶರಣೆ ಶರಣಮ್ಮನವರ ಪುರಾಣ ಪ್ರವಚನ ಮಂಗಲದೊಂದಿಗೆ ಜಾತ್ರೆ ಸಂಪನ್ನಗೊಂಡಿತು.
ಸಂಜೆ ಕುಷ್ಟಗಿಯ ಮದ್ದಾನೇಶ್ವರ ಮಠದ ಶ್ರೀ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಹಾಗೂ ನಿಡಶೇಸಿಯ ಶ್ರೀ ಚನ್ನಬಸವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಿದ ರಥೋತ್ಸವದಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಗ್ರಾಮಸ್ಥರು ಪಾಲ್ಗೊಂಡಿದ್ದರು.