ದೇವದುರ್ಗ: ಮಾನವನ ದುರಾಸೆಯಿಂದ ಪರಿಸರ ದಿನೇ ದಿನೆ ನಾಶವಾಗುತ್ತಿದೆ. ಇದರಿಂದ ಸಕಲ ಜೀವಸಂಕುಲಕ್ಕೂ ಆಪತ್ತು ಬಂದಿದೆ. ಹೀಗಾಗಿ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಬಿಜೆಪಿ ರೈತ ಮೋರ್ಚಾ ತಾಲೂಕು ಅಧ್ಯಕ್ಷ ಕೊಳ್ಳಪ್ಪ ದೇಸಾಯಿ ಕಕ್ಕಲದೊಡ್ಡಿ ಹೇಳಿದರು.
ತಾಲೂಕಿನ ಗಾಣಧಾಳ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ನಿಮಿತ್ತ ಆಯೋಜಿಸಿದ್ದ ಶ್ರಮದಾನ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. ಪರಿಸರ ರಕ್ಷಣೆ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ನಿಮಿತ್ತ ಸೆ.17ರಿಂದ ಅ.2ರವರೆಗೆ ಶ್ರಮದಾನ ಕಾರ್ಯಕ್ರಮ ನಡೆಯಲಿವೆ. ಇಂದು ಗಾಣಧಾಳ ಪ್ರಾಥಮಿಕ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವಿವಿಧ ದೇವಸ್ಥಾನ ಆವಣದಲ್ಲಿ ಸಸಿ ನೆಡಲಾಗುತ್ತಿದೆ. ಅ.2ರವರೆಗೆ ಪ್ರತಿದಿನ ಒಂದೊಂದು ಕಾರ್ಯಕ್ರಮ ರೂಪಿಲಾಗುವುದು ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಸಮಿತಿ ಸದಸ್ಯ ವೆಂಕಟರಾಯ ಬೆನಕನ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಜನಪರ ಕಾರ್ಯಕ್ರಮ ರೂಪಿಸಿ 24 ವರ್ಷಗಳಿಂದ ಜೀವನ ಜನಸೇವೆಗೆ ಮುಡುಪಾಗಿ ಇಟ್ಟಿದ್ದಾರೆ. 13ವರ್ಷ ಗುಜರಾತ್ ಸಿಎಂ ಆಗಿ, 11 ವರ್ಷ ಪ್ರಧಾನಿಯಾಗಿ ದಿನದ 18ಗಂಟೆ ದುಡಿಯತ್ತಿದ್ದಾರೆ. ಅವರ ಕಾರ್ಯಶೈಲಿ ಯುವಕರು ಅನುಸರಿಸಬೇಕು ಎಂದದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಸಿದ್ದನಗೌಡ, ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ, ಮುಖಂಡರಾದ ಭೀಮನಗೌಡ ಮಾಪಾ ಕಕ್ಕಲದೊಡ್ಡಿ, ಯಮನೂರಪ್ಪ, ಪವನ್‌ಕುಮಾರ ಬೆನಕನ್, ಹನುಮಂತ್ರಾಯ ಮೇಟಿ, ಚಂದಪ್ಪ ಬುದ್ದಿನ್ನಿ, ಬಸವರಾಜ ಕಾವಲಿ, ಮಾನಪ್ಪ ಇದ್ದರು.