ಕುಷ್ಟಗಿ: ಉತ್ತಮ ಮಳೆಯಿಂದ ಕೆರೆಯಲ್ಲಿ ಜಲ ಸಂಗ್ರಹ ಹೆಚ್ಚಿದೆ. ಕಡೆಕೋಡಿ ಮೂಲಕ ನೀರು ಹೊರಗೆ ಹರಿಯುತ್ತಿದ್ದು, ಸುತ್ತಲಿನ ರೈತರ ಜಮೀನುಗಳ ಬೋರ್‌ವೆಲ್ಗಳಲ್ಲಿ ಅಂತರ್ಜಲ ವೃದ್ಧಿಯಾಗಲಿದೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.
ಹುಲಿಯಾಪುರ ಕೆರೆಗೆ ಶುಕ್ರವಾರ ಬಾಗಿನ ಅರ್ಪಿಸಿ ಮಾತನಾಡಿದರು. ಮಳೆರಾಯನ ಕೃಪೆಯಿಂದ ಕೆರೆ ತುಂಬಿದೆ. ಹೀಗೆ ಪ್ರತಿ ವರ್ಷ ಉತ್ತಮ ಮಳೆಯಾದರೆ ರೈತನ ಸಂಕಷ್ಟ ದೂರವಾಗಲಿದೆ ಎಂದರು. ಕೆರೆಯ ದಡದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಿವ ಮತ್ತು ಪಾರ್ವತಿ ಮೂರ್ತಿಗಳಿಗೆ ಪೂಜೆ ಸಲ್ಲಿಸಲಾಯಿತು. ಹುಲಿಯಾಪುರ ಗ್ರಾಮದಲ್ಲಿ ಭೋವಿ ಸಮುದಾಯ ಭವನ, ತಾಂಡಾದಲ್ಲಿ ಲಂಬಾಣಿ ಸಮುದಾಯ ಭವನ ಮತ್ತು ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರು ಶಾಸಕ ಬಯ್ಯಾಪುರಗೆ ಮನವಿ ಸಲ್ಲಿಸಿದರು.
ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ರಾಜಶೇಖರ ಕಟ್ಟಿಮನಿ, ಎಇ ಸೂಗಪ್ಪ, ಹಿರೇಮನ್ನಾಪುರ ಗ್ರಾಪಂ ಉಪಾಧ್ಯಕ್ಷ ದೇವಪ್ಪ ಸುಬೇದಾರ್, ಜಿಪಂ ಮಾಜಿ ಸದಸ್ಯ ದೊಡ್ಡಯ್ಯ ಗದ್ದಡಕಿ, ತಾಪಂ ಮಾಜಿ ಸದಸ್ಯ ಭೀಮಣ್ಣ ತಲೇಖಾನ್, ಪ್ರಮುಖರಾದ ಲಿಂಗರಾಜ ಸಾಹುಕಾರ, ಚಂದ್ರಶೇಖರ ಯರದೊಡ್ಡಿ, ಶೇಖರಪ್ಪ ಬಚನಾಳ, ಯಮನೂರ ಬಂಗಲೆ, ಭೀಮಣ್ಣ ಗುಡ್ಡದ ಹನಮಸಾಗರ, ಶರಣಪ್ಪ ನೀರಲೂಟಿ, ಹನಮಂತ ಹಳ್ಳಳ್ಳಿ ಇತರರಿದ್ದರು.