ಗಂಗಾವತಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅವಮಾನಿಸಿದವರನ್ನು ಬಂಧಿಸುವಂತೆ ಆಗ್ರಹಿಸಿ ಕುಷ್ಟಗಿಯ ಪ್ರಗತಿಪರ ಚಿಂತಕರ ಒಕ್ಕೂಟದ ಪದಾಧಿಕಾರಿಗಳು ಡಿಸಿಗೆ ಬರೆದ ಪತ್ರವನ್ನು ಶಿರಸ್ತೇದಾರ್ ವಿಜಯಾ ಮುಂಡರಗಿಗೆ ಸಲ್ಲಿಸಿದರು. ಪ್ರಮುಖರಾದ ನಜೀರ್‌ಸಾಬ್ ಮೂಲಿಮನಿ, ಆರ್.ಕೆ.ದೇಸಾಯಿ, ಶಾರದಾ ಕಟ್ಟಿಮನಿ, ಶರಣಪ್ಪ ಛಲವಾದಿ, ಚನ್ನಪ್ಪ ಬಾವಿಮನಿ, ಫಕ್ಕೀರಪ್ಪ ಟಕ್ಕಳಕಿ, ದುರುಗಪ್ಪ ಹಿರೇಮನಿ ಇತರರಿದ್ದರು.  
ಜಿಲ್ಲೆ

ಕೃತ್ಯ ಎಸಗಿದವರನ್ನು ಬಂಧಿಸಿ

ಕುಷ್ಟಗಿ: ಗಂಗಾವತಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಅವಮಾನಿಸಿರುವ ಪ್ರಕರಣ ಖಂಡಿಸಿ ಪ್ರಗತಿಪರ ಚಿಂತಕರ ಒಕ್ಕೂಟದ ಪದಾಧಿಕಾರಿಗಳು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಕೃತ್ಯ ಎಸಗಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಬರೆದ ಪತ್ರವನ್ನು ಶಿರಸ್ತೇದಾರ್ ವಿಜಯಾ ಮುಂಡರಗಿಗೆ ಸಲ್ಲಿಸಿದರು.

ಅಂಬೇಡ್ಕರ್ ಪ್ರತಿಮೆಗೆ ಅವಮಾನಿಸುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇಂತಹ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಪ್ರಕರಣಗಳು ಮರುಕಳಿಸುವುದಿಲ್ಲ. ಗಂಗಾವತಿಯಲ್ಲಿ ನಡೆದಿರುವ ಪ್ರಕರಣವನ್ನು ಜಿಲ್ಲಾಧಿಕಾರಿ ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ನಜೀರ್‌ಸಾಬ್ ಮೂಲಿಮನಿ, ಆರ್.ಕೆ.ದೇಸಾಯಿ, ಶಾರದಾ ಕಟ್ಟಿಮನಿ, ಶರಣಪ್ಪ ಛಲವಾದಿ, ಚನ್ನಪ್ಪ ಬಾವಿಮನಿ, ಫಕ್ಕೀರಪ್ಪ ಟಕ್ಕಳಕಿ, ದುರುಗಪ್ಪ ಹಿರೇಮನಿ ಇತರರಿದ್ದರು.