ಕುಷ್ಟಗಿಯ ತಾಪಂ ಸಭಾಂಗಣದಲ್ಲಿ ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಸಿಬ್ಬಂದಿಗೆ ಜಿಪಂ ಉಪ ಕಾರ್ಯದರ್ಶಿ ಶರಣಬಸವರಾಜ್ ಕೋವಿಡ್ ಕಿಟ್, ನಮೂನೆಗಳು ಹಾಗೂ ಕವರ್ಸ್ ವಿತರಿಸಿದರು. 
ಜಿಲ್ಲೆ

ಚುನಾವಣೆ ವೇಳೆ ಗೊಂದಲಕ್ಕೆಡೆ ಮಾಡದಿರಿ

Koppal

ಕುಷ್ಟಗಿ: ಚುನಾವಣೆ ವೇಳೆ ಗೊಂದಲಕ್ಕೆಡೆ ಮಾಡದೆ ಕಾರ್ಯ ನಿರ್ವಹಿಸಿ ಎಂದು ಜಿಪಂ ಉಪಕಾರ್ಯದರ್ಶಿ ಶರಣಬಸವರಾಜ್ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಚುನಾವಣೆ ಪೂರ್ವದಲ್ಲಿ ನಡೆಯುವ ಸಭೆ ಹಾಗೂ ತರಬೇತಿ ಕಾರ್ಯಾಗಾರಗಳಲ್ಲಿ ಗೊಂದಲ ನಿವಾರಿಸಿಕೊಂಡು ಚುನಾವಣೆ ಸುಗಮ ರೀತಿಯಲ್ಲಿ ನಡೆಯುವಂತೆ ಕಾರ್ಯ ನಿರ್ವಹಿಸಿ ಎಂದು ತಿಳಿಸಿದರು.

ತಹಸೀಲ್ದಾರ್ ಎಂ. ಸಿದ್ದೇಶ್ ಮಾತನಾಡಿ, ನಾಮಪತ್ರ ಸ್ವೀಕರಿಸುವ ವೇಳೆ ಸರಿಯಾಗಿ ಪರಿಶೀಲಿಸಬೇಕು. ನ್ಯಾಯ ಸಮ್ಮತ ಚುನಾವಣೆಗೆ ಬೇಕಾದ ಸಹಕಾರ ತಾಲೂಕು ಆಡಳಿತ ನೀಡಲಿದೆ ಎಂದರು. ಮಾಸ್ಟರ್ ಟ್ರೈನರ್ ಕಿಶನ್‌ರಾವ್ ಕುಲಕರ್ಣಿ ಹಾಗೂ ಮೆಹಬೂಬ್ ಸಾಬ್ ಕಂದಗಲ್ ಚುನಾವಣೆ ಸಿಬ್ಬಂದಿಗೆ ತರಬೇತಿ ನೀಡಿದರು. ಚುನಾವಣೆ ಅಧಿಕಾರಿಗಳಿಗೆ ಕೋವಿಡ್ ಕಿಟ್, ನಮೂನೆಗಳು ಹಾಗೂ ಕವರ್ಸ್ ನೀಡಲಾಯಿತು. ತಾಪಂ ಇಒ ತಿಮ್ಮಪ್ಪ, ಚುನಾವಣೆ ವಿಭಾಗದ ಅಧಿಕಾರಿ ಅಜಿತ್ ಜೋಶಿ, ಅರವಿಂದ್ ದೇಸಾಯಿ ಇದ್ದರು.