ಕುಷ್ಟಗಿ ರಾಷ್ಟ್ರೀಯ ಹೆದ್ದಾರಿ ಫ್ಲೈಓವರ್ ಬಳಿ ಇರುವ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಡಾ.ಪುನೀತ್ ರಾಜಕುಮಾರ ಜನ್ಮದಿನ ಆಚರಿಸಲಾಯಿತು. ಅಪ್ಪು ಯೂತ್ ಬ್ರಿಗೇಡ್ ಅಧ್ಯಕ್ಷ ಶಂಕರ್ ಮಿಸ್ಕಿನ್, ಮುತ್ತಣ್ಣ ಬಾಚಲಾಪುರ, ನವೀನ್ ಕೆಂಗೇರಿ ಇತರರಿದ್ದರು.  
ಜಿಲ್ಲೆ

ಕುಷ್ಟಗಿಯಲ್ಲಿ ಅನ್ನ ಸಂತರ್ಪಣೆ

ಕುರುವತ್ತಿ ಶ್ರೀಕಾಂತಪ್ಪ

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಡಾ.ಪುನೀತ್ ರಾಜಕುಮಾರ ಜನ್ಮದಿನ ಸೋಮವಾರ ಆಚರಿಸಲಾಯಿತು.

ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್ ಬಳಿ ಅಪ್ಪು ಭಾವಚಿತ್ರಕ್ಕೆ ಮಾಲಾರ್ಪಣೆಯೊಂದಿಗೆ ಪೂಜೆ ಸಲ್ಲಿಸಿದ ಅಭಿಮಾನಿಗಳು, ಅಪ್ಪು ಸಾರ್ಥಕ ಜೀವನ ಕುರಿತು ಕೊಂಡಾಡಿದರು.

ಜನ್ಮದಿನ ನಿಮಿತ್ತ ಅಪ್ಪು ಯೂತ್ ಬ್ರಿಗೇಡ್ ಸದಸ್ಯರು ಅನ್ನ ಸಂತರ್ಪಣೆ ಮಾಡಿದರು. ನಂತರ ಮಜ್ಜಿಗೆ ವಿತರಿಸಿದರು. ಅಪ್ಪು ಯೂತ್ ಅಭಿಮಾನಿಗಳಾದ ಅಕ್ಕು ತಾಳಕೇರಿ, ಮಂಜು ಟೆಂಗುಂಟಿ, ಶಶಿಕುಮಾರ ಗುಗ್ಗರಿ, ಅಂಜನಿ ಕಂದಕೂರು, ಕಾಶಿನಾಥ ಕಟ್ಟಿಮನಿ, ಸುಭಾಷ್ ತಾಳಕೇರಿ, ನಿಂಗಪ್ಪ ಕಂದಕೂರು, ಬಸವರಾಜ ಮಂಗಳೂರು ಇತರರು ಇದ್ದರು.