ದೋಟಿಹಾಳ ಗ್ರಾಮವನ್ನು ಕುಷ್ಟಗಿ ಹೋಬಳಿಯ ವಿಸ್ತರಣಾ ಕೇಂದ್ರವನ್ನಾಗಿ ಘೋಷಿಸುವಂತೆ ಒತ್ತಾಯಿಸಿ ವಿಸ್ತರಣಾ ಕೇಂದ್ರ ಹೋರಾಟ ಸಮಿತಿ ಪದಾಧಿಕಾರಿಗಳು ಕಂದಾಯ ಸಚಿವಗೆ ಬರೆದ ಪತ್ರವನ್ನು ಕುಷ್ಟಗಿಯಲ್ಲಿ ಗ್ರೇಡ್-2 ತಹಸಿಲ್ದಾರ್ ರಜಿನಿಕಾಂತ್‌ಗೆ ಸಲ್ಲಿಸಿದರು. ಸಮಿತಿ ಅಧ್ಯಕ್ಷ ಶ್ರೀನಿವಾಸ್ ಕಂಟ್ಲಿ, ಗ್ರಾಪಂ ಅಧ್ಯಕ್ಷ ಮಹೇಶ್ ಕಾಳಗಿ ಇತರರಿದ್ದರು. 
ಜಿಲ್ಲೆ

ದೋಟಿಹಾಳ ಹೋಬಳಿ ಕೇಂದ್ರವಾಗಲಿ

ಶ್ರೀನಾಥ

ಕುಷ್ಟಗಿ: ತಾಲೂಕಿನ ದೋಟಿಹಾಳ ಗ್ರಾಮವನ್ನು ಕುಷ್ಟಗಿ ಹೋಬಳಿಯ ವಿಸ್ತರಣಾ ಕೇಂದ್ರವನ್ನಾಗಿ ಘೋಷಿಸುವಂತೆ ದೋಟಿಹಾಳ ಹೋಬಳಿ ವಿಸ್ತರಣಾ ಕೇಂದ್ರ ಹೋರಾಟ ಸಮಿತಿ ಪದಾಧಿಕಾರಿಗಳು ಕಂದಾಯ ಸಚಿವಗೆ ಬರೆದ ಪತ್ರವನ್ನು ಗ್ರೇಡ್-2 ತಹಸಿಲ್ದಾರ್ ರಜನಿಕಾಂತ್‌ಗೆ ಸೋಮವಾರ ಸಲ್ಲಿಸಿದರು.

ಹೋಬಳಿ ವಿಸ್ತರಣಾ ಕೇಂದ್ರ ಘೋಷಿಸುವಂತೆ ಒತ್ತಾಯಿಸಿ ಕಳೆದ ಮೂರು ವರ್ಷಗಳ ಹಿಂದೆಯೇ ಪ್ರತಿಭಟನೆ ನಡೆಸಲಾಗಿತ್ತು. ಆ ವೇಳೆ ಅಂದಿನ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ, ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು.

ಈವರೆಗೆ ಈಡೇರಿಲ್ಲ. ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಜಿಲ್ಲೆಯ ಬೇವೂರನ್ನು ಹೋಬಳಿ ಕೇಂದ್ರವನ್ನಾಗಿ ಘೋಷಿಸಿತು. ಅದೇ ವೇಳೆ ದೋಟಿಹಾಳ ವಿಸ್ತರಣಾ ಕೇಂದ್ರಕ್ಕಾಗಿ ಮನವಿ ಸಲ್ಲಿಸಿ, ಅಲೆದಾಡಿದರೂ ಪ್ರಯೋಜನವಾಗಲಿಲ್ಲ.

ಇದೇ ಬೇಡಿಕೆ ಮುಂದಿಟ್ಟುಕೊಂಡು ಆ. 11ರಂದು ಗ್ರಾಮದ ಬಸ್ ನಿಲ್ದಾಣ ಬಳಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಿದ್ದೇವೆ. ಧರಣಿಗೆ ಆಸ್ಪದ ನೀಡದಂತೆ ಸರ್ಕಾರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.

ಹೋರಾಟ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಕಂಟ್ಲಿ, ಗ್ರಾಪಂ ಅಧ್ಯಕ್ಷ ಮಹೇಶ್ ಕಾಳಗಿ, ಪ್ರಮುಖರಾದ ಬಾಳಪ್ಪ ಅರಳಿಕಟ್ಟಿ, ಮನ್ಸೂರ್ ಅಲಿ ಬನ್ನು, ಪರಶುರಾಮ ಈಳಗೇರ್, ಬಸವರಾಜ ಗಾಣಿಗೇರ್, ಕಿರಣ್ ಜ್ಯೋತಿ ಇತರರಿದ್ದರು.