ಕುಷ್ಟಗಿ-ನರಗುಂದ-ಘಟಪ್ರಭಾ ಹೊಸ ರೈಲು ಮಾರ್ಗದ ಹೋರಾಟ ಸಮಿತಿಯ ನಿಯೋಗ ಬೆಂಗಳೂರಿನಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ ಮನವಿ ಸಲ್ಲಿಸಿತು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ರೈಲ್ವೆ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ವೀರೇಶ ಬಂಗಾರಶೆಟ್ಟರ್, ಪುರಸಭೆ ಅಧ್ಯಕ್ಷ ಮಹಾಂತೇಶ ಕಲಬಾವಿ, ಪ್ರಮುಖರಾದ ಕೆ.ಮಹೇಶ, ಮಲ್ಲಣ್ಣ ಪಲ್ಲೇದ ಇತರರಿದ್ದರು. 
ಜಿಲ್ಲೆ

ಕೇಂದ್ರ ಹೊಸ ರೈಲ್ವೆ ಮಾರ್ಗ ಒದಗಿಸಲಿ

ಕುಷ್ಟಗಿ: ರೈಲು ಮಾರ್ಗದ ಬೇಡಿಕೆಯನ್ನು ಕೇಂದ್ರ ಬಜೆಟ್‌ನಲ್ಲಿ ಸೇರಿಸಲು ಕ್ರಮಹಿಸುವಂತೆ ಒತ್ತಾಯಿಸಿ ಕುಷ್ಟಗಿ-ನರಗುಂದ-ಘಟಪ್ರಭಾ ಹೊಸ ರೈಲು ಮಾರ್ಗದ ಹೋರಾಟ ಸಮಿತಿಯ ನಿಯೋಗ ಬೆಂಗಳೂರಿನಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿತು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ರೈಲ್ವೆ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ವೀರೇಶ ಬಂಗಾರಶೆಟ್ಟರ್ ಮಾತನಾಡಿ, ಕುಷ್ಟಗಿ-ನರಗುಂದ-ಘಟಪ್ರಭಾ ಮಾರ್ಗ ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಿಗೆ ಸಂಪರ್ಕ ಸೇತುವೆ ಆಗಲಿದೆ. ಕೃಷಿ, ತೋಟಗಾರಿಕೆ ಉತ್ಪನ್ನಗಳ ವಾಣಿಜ್ಯ ವಹಿವಾಟು, ಸರಕು ಸಾಗಣೆಗೆ ಅನುಕೂಲವಾಗಲಿದೆ ಎಂದರು. ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಕುಷ್ಟಗಿ-ನರಗುಂದ-ಘಟಪ್ರಭಾ ರೈಲ್ವೆ ಮಾರ್ಗದ ಬೇಡಿಕೆ ಪ್ರಸ್ತಾಪ ಕೇಂದ್ರ ಬಜೆಟ್ ಸಂದರ್ಭದಲ್ಲಿ ಆಗಿದ್ದಲ್ಲಿ ರೈಲ್ವೆ ಮಾರ್ಗದ ಬೇಡಿಕೆ ಸೇರಿಸುವ ಸಾಧ್ಯತೆ ಇತ್ತು. ಬಜೆಟ್ ನಂತರ ಮನವಿ ಸಲ್ಲಿಸಿರುವುದರಿಂದ 2026-27ನೇ ಸಾಲಿನ ಬಜೆಟ್‌ನಲ್ಲಿ ಸೇರಿಸಲಾಗುವುದು. ಸಾಧ್ಯವಾದಲ್ಲಿ ಹೊಸ ರೈಲ್ವೆ ಮಾರ್ಗ ಸೇರಿಸುವ ಅವಕಾಶ ಇದ್ದರೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.ಜಿಪಂ ಮಾಜಿ ಸದಸ್ಯ ಕೆ.ಮಹೇಶ, ಪುರಸಭೆ ಅಧ್ಯಕ್ಷ ಮಹಾಂತೇಶ ಕಲಬಾವಿ, ಪ್ರಮುಖರಾದ ಬಸವರಾಜ ಹಳ್ಳೂರು, ಮಲ್ಲಣ್ಣ ಪಲ್ಲೇದ, ಮಹಾಂತಯ್ಯ ಅರಳೆಲೆಮಠ, ನಜೀರಸಾಬ ಮೂಲಿಮನಿ, ಬಾಬು ಘೋರ್ಪಡೆ, ಮಂಜುನಾಥ ಮಹಾಲಿಂಗಪುರ, ಚಂದ್ರಕಾಂತ ವಡಗೇರಿ, ಬಸವರಾಜ ಗಾಣಿಗೇರ ಇತರರಿದ್ದರು.