ಕುಷ್ಟಗಿಯಲ್ಲಿ ಚಾಯ್ ತಲಾಬ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದು. 
ಜಿಲ್ಲೆ

ಕುಷ್ಟಗಿಯಲ್ಲಿ ಬೆಂಕಿ ಆಕಸ್ಮಿಕ: ಚಹಾದ ಅಂಗಡಿಯೊಳಗೆ ಅಗ್ನಿ ನರ್ತನ

Koppal

ಕುಷ್ಟಗಿ: ಪಟ್ಟಣದ ಪೊಲೀಸ್ ಠಾಣೆ ಎದುರಿನ ಚಾಯ್ ತಲಬ್ ಹೆಸರಿನ ಚಹಾದ ಅಂಗಡಿಯಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡು ಹಲವು ವಸ್ತುಗಳು ಸುಟ್ಟು ಕರಕಲಾಗಿವೆ. ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದ್ದು, ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಇಳಕಲ್ ಮೂಲದ ಮುತ್ತಣ್ಣ ಗೊಂದಿ ಎನ್ನುವವರು ನಡೆಸುತ್ತಿದ್ದ ಅಂಗಡಿಯನ್ನು ವರ್ಷದ ಹಿಂದೆಯಷ್ಟೇ ಆರಂಭಿಲಾಗಿತ್ತು. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.