ಮೂಡಲಗಿ: ಕುರುಹಿನಶೆಟ್ಟಿ ಸೊಸೈಟಿಯು ಕಳೆದ ಮಾರ್ಚ್ ಅಂತ್ಯಕ್ಕೆ 4.10 ಕೋಟಿ ರೂ. ಲಾಭಗಳಿಸಿ ಪ್ರಗತಿ ಪತಥದತ್ತ ಸಾಗಿದೆ ಎಂದು ಸೊಸೈಟಿ ಅಧ್ಯಕ್ಷ ಬಸಪ್ಪ ಮುಗಳಖೋಡ ಹೇಳಿದರು.
ಪಟ್ಟಣದ ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2022-23ನೇ ಸಾಲಿನ 28ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೊಸೈಟಿ ಈಗಾಗಲೇ ಹದಿನಾಲ್ಕು ಶಾಖೆಗಳನ್ನು
ಹೊಂದಿ ಒಟ್ಟು 137.02 ಕೋಟಿ ರೂ. ಸಾಲ ವಿತರಿಸುವುದರೊಂದಿಗೆ ಒಟ್ಟು 207.10 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ ಎಂದರು.
ಪಟ್ಟಣದ ಗುರು ನೀಲಕಂಠ ಮಠದ ಶಿವಾನಂದ ಶ್ರೀ ಸಾನ್ನಿಧ್ಯ ವಹಿಸಿದ್ದರು. ನಿವತ್ತ ಉಪನ್ಯಾಸಕ ಶಿವುಕುಮಾರ ಶಾಸ್ತ್ರೀಮಠ, ನೇಕಾರ ಸಂಘದ ಅಧ್ಯಕ್ಷ ಶಿವಲಿಂಗ ಟರ್ಕಿ, ಸೊಸೈಟಿ ಉಪಾಧ್ಯಕ್ಷ ಲಕ್ಕಪ್ಪ ಪೂಜೇರಿ, ವಿವಿಧ ಶಾಖೆಯ ಅಧ್ಯಕ್ಷರಾದ ಶಂಕರಯ್ಯ ಹಿರೇಮಠ, ಸಾಗರ ಧನಪಾಲ ಚಾವಜಿ, ದಶರಥ ಹುಲಕುಂದ, ಲಕ್ಷ್ಮಣ ಇತಾಪಿ, ಬಸವರಾಜ ಬಟಕುರ್ಕಿ, ಲಿತಾ ಹೊಸೂರ, ಸರವರಖಾಣ ಇನಾಮದಾರ್, ಸಂಜಯ ವಸ್ತ್ರದ, ತಾತ್ಯಾಗೌಡ ಉಮರಾಣಿ, ಮಲ್ಲಿಕಾರ್ಜುನ ಚಟ್ಟಿ, ಮಲ್ಲಿಕಾರ್ಜುನ ಲೋಕನ್ನವರ, ಕುತುಬುದ್ದಿನ್ ದಬಾಡಿ, ಬಸವರಾಜ ಕಾಜಗಾರ, ಬೆಂಕಾಜಿನಾಯ್ಕ ಪಾಟೀಲ, ವೀರಣ್ಣಗೌಡ ಪಾಟೀಲ, ಪ್ರಧಾನ ಕಚೇರಿ ನಿರ್ದೇಶಕರಾದ ಸುಭಾಷ ಬೆಳಕೂಡ, ಇಸ್ಮಾಯಿಲ್ ಕಳ್ಳಿಮನಿ, ಗೊಡಚಪ್ಪ ಮುಗೋಡ, ಬಸವರಾಜ ಬೆಳಕೂಡ, ವಿಶಾಲ ಶೀಲವಂತ, ಉಮಾ ಬೆಳಕೂಡ, ಶಾಂತವ್ವಾ ಬೊರಗಲ್, ಮಹಾಬೂಬಿ ಕಳ್ಳಿಮನಿ, ಮಾಲಾ ಬೆಳಕೂಡ, ಶ್ಯಾಲನ್ ಕೊಡತೆ, ಸೊಸೈಟಿ ಪ್ರಧಾನ ವ್ಯವಸ್ಥಾಪಕ ರಮೇಶ ವಂಟಗೋಡಿ, ಚಂದ್ರಶೇಖರ ಕೋಡತೆ, ಪ್ರಮೋದ ಯಲಬುರ್ಗಿಮಠ, ಶಿವಾನಂದ ಮುರಗೋಡ, ಪ್ರಕಾಶ ಬೆಳಕೂಡ ಇತರರಿದ್ದರು.