ಕುರುಗೋಡು ತಾಲೂಕು ಆಡಳಿತ ಕಚೇರಿಯಲ್ಲಿ ಗುರುವಾರ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ನರಸಪ್ಪ, ಗ್ರೇಡ್-2 ತಹಸೀಲ್ದಾರ್ ಮಲ್ಲೇಶಪ್ಪ, ಸಿಬ್ಬಂದಿ ವಿಜಯ್ ಕುಮಾರ್, ಸುರೇಶ್ ಲತಾ, ಸ್ವಾತಿ, ಶ್ವೇತಾ, ರಾಜೇಶ್ವರಿ ಇದ್ದರು. 
ಜಿಲ್ಲೆ

ಸುಜ್ಞಾನಿಗಳನ್ನಾಗಿಸಲು ಯತ್ನ

ಶ್ರೀನಾಥ

ಕುರುಗೋಡು: ಲೌಕಿಕ ಮತ್ತು ಆಧ್ಯಾತ್ಮಿಕ ಬದುಕಿಗೆ ಯಾವ ಲೋಪವೂ ಬಾರದಂತೆ ನಡೆದುಕೊಳ್ಳುತ್ತಿದ್ದರಿಂದ ಶರಣ ಸಮೂಹ ಹಡಪದ ಅಪ್ಪಣ್ಣ ಅವರನ್ನು ನಿಜಸುಖಿ ಅಪ್ಪಣ್ಣ ಎಂದು ಕರೆಯುತ್ತಿದ್ದರು ಎಂದು ತಹಸೀಲ್ದಾರ್ ನರಸಪ್ಪ ತಿಳಿಸಿದರು.

ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ಗುರುವಾರ ಹಡಪದ ಅಪ್ಪಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಪ್ಪಣ್ಣ ಅವರು ಬದುಕಿನುದ್ದಕ್ಕೂ ಬಸವಣ್ಣ ಅವರ ನಂಬಿಕಸ್ಥ ಸಹಾಯಕರಾಗಿದ್ದರು.

ವಚನಗಳಲ್ಲಿ ಶರಣರಿಗಿರಬೇಕಾದ ಕಾಯಕನಿಷ್ಠೆ, ದಾಸೋಹ, ವೈರಾಗ್ಯ, ಭಕ್ತಿ, ಆಚಾರ-ವಿಚಾರಗಳನ್ನು ವಿಡಂಭಿಸಿ ಅಜ್ಞಾನಿಗಳನ್ನು ಸುಜ್ಞಾನಿಗಳನ್ನಾಗಿ ಮಾಡಲು ಯತ್ನಿಸಿದ್ದಾರೆ ಎಂದರು.