ಗುತ್ತಿಗನೂರು ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಮಿದುಳು ದಿನಾಚರಣೆ ಹಾಗೂ ಡೆಂೆ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಉದ್ಘಾಟನೆ ವೇಳೆ ವೈದ್ಯಾಧಿಕಾರಿ ಲಕ್ಷ್ಮಣ್ ನಾಯಕ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರಾಘವ ಶೆಟ್ಟಿ ಇದ್ದರು. 
ಜಿಲ್ಲೆ

ಮಿದುಳಿನ ಆರೋಗ್ಯದ ಕಾಳಜಿವಹಿಸಿ

ನರೇಶ್ ಕುಮಾರ್

ಕುರುಗೋಡು: ಸಮೀಪದ ಗುತ್ತಿಗನೂರು ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಮಿದುಳು ದಿನಾಚರಣೆ ಹಾಗೂ ಡೆಂೆ ವಿರೋಧಿ ಮಾಸಾಚರಣೆ ಕಾರ್ಯಕ್ರಮ ನಡೆಯಿತು.

ವೈದ್ಯಾಧಿಕಾರಿ ಲಕ್ಷ್ಮಣ ನಾಯಕ್ ಮಾತನಾಡಿ, ಮಿದುಳು ಮನುಷ್ಯನ ದೇಹವನ್ನು ನಿಯಂತ್ರಿಸುವ ಶಕ್ತಿ ಹೊಂದಿದೆ. ಅದರ ರಕ್ಷಣೆ, ಆರೈಕೆ ಬಗ್ಗೆ ಪ್ರತಿಯೊಬ್ಬರೂ ಜಾಗ್ರತೆವಹಿಸಬೇಕು. ಹೆಚ್ಚಾಗಿ ಚಿಂತೆ, ಒತ್ತಡಕ್ಕೆ ಒಳಗಾಗಬಾರದು.

ಆಗಾಗ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದರು. ಮನೆ ಮುಂದೆ ಸ್ವಚ್ಛತೆ ಕಾಪಾಡಿಕೊಂಡು ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆಗೆ ಒತ್ತು ಕೊಡಬೇಕು. ಇದರಿಂದ ಸಾಂಕ್ರಾಮಿಕ ರೋಗಗಳಿಂದ ದೂರವಿರಬಹುದು ಎಂದು ತಿಳಿಸಿದರು.

ಆರೋಗ್ಯ ಅಧಿಕಾರಿ ಚಿದಾನಂದಯ್ಯ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.