ಕುರುಗೋಡು ತಹಸೀಲ್ದಾರ್ ಕೆ.ರಾಘವೇಂದ್ರರಾವ್‌ಗೆ ಮಂಗಳವಾರ ಮನವಿ ಸಲ್ಲಿಸಿದ ರಾಜ್ಯ ಸ್ವಾಭಿಮಾನಿ ಪ.ಜಾತಿ ಮತ್ತು ಪ.ಪಂಗಡಗಳ ಹೋರಾಟ ಕ್ರಿಯಾ ಸಮಿತಿ ತಾಲೂಕು ಘಟಕ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿತು. 
ಜಿಲ್ಲೆ

ನಾಗಮೋಹನ್ ದಾಸ್ ವರದಿ ಜಾರಿಗೊಳಿಸಲು ಒತ್ತಾಯ

ಕುರುಗೋಡು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಮಾಡುವಂತೆ ಒತ್ತಾಯಿಸಿ ರಾಜ್ಯ ಸ್ವಾಭಿಮಾನಿ ಪ.ಜಾತಿ ಮತ್ತು ಪ.ಪಂಗಡಗಳ ಹೋರಾಟ ಕ್ರಿಯಾ ಸಮಿತಿ ತಾಲೂಕು ಘಟಕ ಮಂಗಳವಾರ ತಹಸೀಲ್ದಾರ್ ಕೆ.ರಾಘವೇಂದ್ರರಾವ್‌ಗೆ ಮನವಿ ಸಲ್ಲಿಸಿತು.

ಸಮಿತಿಯ ಪ್ರಮುಖ ವಿ.ಎಸ್.ಶಿವಶಂಕರ್ ಮಾತನಾಡಿ, ಪ.ಜಾತಿ ಮತ್ತು ಪ.ಪಂಗಡಗಳ ಜನಸಂಖ್ಯೆಗೆ ಸಮನಾಗಿ ಮೀಸಲಾತಿ ಹೆಚ್ಚಿಸುವ ಉದ್ದೇಶಕ್ಕೆ ರಚನೆಯಾದ ಜಸ್ಟಿಸ್ ನಾಗಮೋಹನ್ ದಾಸ್ ವರದಿ ಸಲ್ಲಿಕೆಯಾಗಿ ಎರಡು ವರ್ಷ ಕಳೆದಿದೆ. ಇದರ ಅನುಷ್ಠಾನಕ್ಕೆ ಒತ್ತಾಯಿಸಿ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಕುರುಗೋಡಿನಲ್ಲೂ ಮೇ 10 ರಂದು ಪ್ರತಿಭಟನ ಆರಂಭವಾಗಿದ್ದು, 20ರವರೆಗೆ ಸತ್ಯಾಗ್ರಹ, ಮಾನವ ಸರಪಳಿ ನಡೆಸಲಾಗುವುದು ಎಂದರು.