ಕುರುಗೋಡಿನ ಶ್ರೀ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಕಾರ್ತಿಕ ಮಾಸದ ಪ್ರಯುಕ್ತ ದೇವಸ್ಥಾನದ ಆವರಣದಲ್ಲಿ ಮಣ್ಣಿನ ಹಣತೆಗಳನ್ನು ಭಕ್ತರು ಕುಟುಂಬದೊಡನೆ ಹಚ್ಚಿದರು. 
ಜಿಲ್ಲೆ

ಕುರುಗೋಡು ಶ್ರೀ ದೊಡ್ಡಬಸವೇಶ್ವರಗೆ ವಿಶೇಷ ಪೂಜೆ

ಕುರುಗೋಡು: ಕಾರ್ತಿಕ ಮಾಸದ ಎರಡನೇ ಸೋಮವಾರ ಪ್ರಯುಕ್ತ ಪಟ್ಟಣದ ಆರಾಧ್ಯ ದೈವ ಶ್ರೀ ದೊಡ್ಡಬಸವೇಶ್ವರಗೆ ವಿಶೇಷ ಹೂವಿನ ಅಲಂಕಾರ ಜತೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನಕ್ಕೆ ಬಂದ ಭಕ್ತರಿಗೆ ಅನ್ನಪೂರ್ಣೇಶ್ವರಿ ಸೇವಾ ಸಮಿತಿ ಅನ್ನಸಂತರ್ಪಣೆ ಏರ್ಪಡಿಸಿತ್ತು. ಪರಮೇಶ್ವರನಿಗೆ ಪ್ರಿಯವಾದ ಕಾರ್ತಿಕ ಮಾಸದಲ್ಲಿ ದೂರದ ಊರುಗಳಿಂದ ಆಗಮಿಸಿದ್ದ ಭಕ್ತರು ಸೋಮವಾರ ಸಂಜೆ ದೇವಸ್ಥಾನದ ಆವರಣದಲ್ಲಿ ಮಣ್ಣಿನ ಹಣತೆಗಳನ್ನು ಕುಟುಂಬ ಸಮೇತರಾಗಿ ಬೆಳಗಿಸಿ ಪೂಜೆ ಸಲ್ಲಿಸಿದರು. ನಂತರ ದೀಪದ ಹಣತೆ ಬೆಳಕಿನಲ್ಲಿ ಕುಟುಂಬದೊಡನೆ ಸೆಲ್ಫಿ ತೆಗೆದುಕೊಳ್ಳುವುದು ವಿಶೇಷವಾಗಿ ಕಂಡುಬಂತು.