ಕುರುಗೋಡು: ಪಟ್ಟಣದಲ್ಲಿ ಜೆಸ್ಕಾಂ ಉಪ ವಿಭಾಗ ಕಚೇರಿ ಆರಂಭಗೊಂಡಿದ್ದು, ಹಲವು ವರ್ಷಗಳ ಬೇಡಿಕೆ ಈಡೇರಿದೆ.
ಉಪ ವಿಭಾಗ ಕಚೇರಿಗೆ ಎಇಇ ರಾಜೇಂದ್ರ ಪ್ರಧಾನ್ ಅವರನ್ನು ನೇಮಿಸಲಾಗಿದೆ. ಈ ಮೊದಲು ಬಳ್ಳಾರಿ ತಾಲೂಕಿನ ಉಪ ವಿಭಾಗ ವ್ಯಾಪ್ತಿಗೆ ಒಳಪಟ್ಟಿತ್ತು. ಇದೀಗ ಬಳ್ಳಾರಿ ತಾಲೂಕಿನ ಕುಡತಿನಿ ಮತ್ತು ಕಂಪ್ಲಿ ತಾಲೂಕಿನ ಎಮ್ಮಿಗನೂರು ಪಾಲನಾ ಶಾಖೆಗಳು ಕುರುಗೋಡು ಉಪ ವಿಭಾಗದ ಕಚೇರಿ ವ್ಯಾಪ್ತಿಗೆ ಬರಲಿವೆ.
ಪಟ್ಟಣದಲ್ಲಿ ಕಚೇರಿ ಆರಂಭವಾಗಿರುವುದರಿಂದ ತಾಲೂಕು ವ್ಯಾಪ್ತಿಯ ಗ್ರಾಮಗಳ ಗ್ರಾಹಕರು ಎದುರಿಸುವ ವಿದ್ಯುತ್ ಸಮಸ್ಯೆಗಳಿಗೆ ತ್ವರಿತ ಪರಿಹಾರ ದೊರೆಯಲಿದ್ದು, ಸದುಪಯೋಗ ಪಡೆದುಕೊಳ್ಳಬೇಕೆಂದು ಎಇಇ ರಾಜೇಂದ್ರ ಪ್ರಸಾದ್ ತಿಳಿಸಿದರು.