ಕಾರ್ಣಿಕ ನುಡಿ ಹೇಳುತ್ತಿರುವ ಗೊರವರ ನವೀನ್ ತಾತಾ ಕಾರ್ಣಿಕ. 
ಜಿಲ್ಲೆ

ಹುಟ್ಟಿದೆ ಕಂದ ಕಷ್ಟ ಪಟ್ಟು ಸುಖ ಪಟ್ಟಿತಲೇ ಪರಾಕ್

ಕುರುಗೋಡು: ‘ಹುಟ್ಟಿದೆ ಕಂದ ಕಷ್ಟ ಪಟ್ಟು ಸುಖ ಪಟ್ಟಿತಲೇ ಪರಾಕ್’. ಇದು ಗೊರವರ ನವೀನ್ ತಾತಾ ನುಡಿದ ಕಾರ್ಣಿಕ ಭವಿಷ್ಯ. ಯರ‌್ರಂಗಳಿ ಗ್ರಾಮದ ಮೈಲಾರ ಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ದಸರಾ ಹಬ್ಬದ ಪ್ರಯುಕ್ತ ದೇವಸ್ಥಾನದಲ್ಲಿ ಮೈಲಾರ ಲಿಂಗೇಶ್ವರಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಗೊರವರ ನವೀನ್ ತಾತಾ ‘ಏಳುಕೋಟಿ, ಏಳುಕೋಟಿ’ ಎಂದು ಸ್ಮರಣೆ ಮಾಡುತ್ತಾ ಕಂಬಕ್ಕೆ ಕಟ್ಟಿದ್ದ ಕಬ್ಬಣದ ಸರಪಳಿಯ ತುಂಡಾಗಿಸಿದರು. ಬಳಿಕ ಕಂಬವೇರಿ ಮೇಲಿನಂತೆ ಕಾರ್ಣಿಕ ಭವಿಷ್ಯ ನುಡಿದರು. ನಂತರ ಭಕ್ತರು ಹರಕೆ ತೀರಿಸಿದರು.