ಕುರುಗೋಡು ತಾಲೂಕು ಆಡಳಿತ ಕಚೇರಿಯಲ್ಲಿ ಪಿಎಸ್‌ಐ ಸುಪ್ರೀತ್ ವಿರೂಪಾಕ್ಷಪ್ಪ, ದೇವದಾಸಿ ಮಹಿಳಾ ವಿಮೋಚನಾ ಸಂಘದ ಅಧ್ಯಕ್ಷೆ ಎನ್. ಯಂಕಮ್ಮ ಅವರನ್ನು ತಹಸೀಲ್ದಾರ್ ನರಸಪ್ಪ, ಗ್ರೇಡ್ 2 ತಹಸೀಲ್ದಾರ್ ಮಲ್ಲೇಶಪ್ಪ, ಯಲ್ಲಾಪುರದ ಬಿಳುಬಾಯಿ ಗೌರವಿಸಿದರು. 
ಜಿಲ್ಲೆ

ದೇವದಾಸಿ ಆಚರಣೆ ಅಪರಾಧ

ಶ್ರೀನಾಥ

ಕುರುಗೋಡು: ಅನಿಷ್ಟ ಪದ್ಧತಿಗಳು ಸಮಾಜಕ್ಕೆ ಮಾರಕವಾಗಿದೆ. ಅವುಗಳ ನಿರ್ಮೂಲನೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ದೇವದಾಸಿ ಪದ್ಧತಿಯಲ್ಲಿ ಯುವತಿಗೆ ಮುತ್ತು ಕಟ್ಟುವುದು ಅಪರಾಧ ಎಂದು ತಹಸೀಲ್ದಾರ್ ನರಸಪ್ಪ ಹೇಳಿದರು.

ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ದೇವದಾಸಿ ಪದ್ಧತಿಯಿಂದ ಯುವತಿಯನ್ನು ರಕ್ಷಿಸಿ, ಪ್ರೀತಿಸಿದ ಯುವಕನ ಜತೆಗೆ ವಿವಾಹ ಮಾಡಿಸಿದ್ದ ಪಿಎಸ್‌ಐ ಸುಪ್ರೀತ್ ವಿರೂಪಾಕ್ಷಪ್ಪ, ದೇವದಾಸಿ ಮಹಿಳಾ ವಿಮೋಚನಾ ಸಂಘದ ಅಧ್ಯಕ್ಷೆ ಎನ್. ಯಂಕಮ್ಮ ಅವರನ್ನು ಗೌರವಿಸಿ ಮಾತನಾಡಿದರು.

ಪಿಎಸ್‌ಐ ಸುಪ್ರೀತ್ ವಿರೂಪಾಕ್ಷಪ್ಪ ಮಾತನಾಡಿ, ಕಾನೂನು, ಶಿಕ್ಷಣದ ಕೊರತೆಯಿಂದ ಕೆಲ ಹಳ್ಳಿಗಳಲ್ಲಿ ಅನಿಷ್ಟ ದೇವದಾಸಿ ಪದ್ಧತಿ ಜೀವಂತವಾಗಿರುವುದು ಕಳವಳಕಾರಿಯಾಗಿದೆ. ಇಂತಹ ಆಚರಣೆಯ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಗ್ರೇಡ್ 2 ತಹಸೀಲ್ದಾರ್ ಮಲ್ಲೇಶಪ್ಪ, ಯಲ್ಲಾಪುರದ ಬಿಳುಬಾಯಿ ಸೇರಿ ಇತರರಿದ್ದರು.