ಕುರುಗೋಡಿನಲ್ಲಿ ಹಳೇ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಅಂಗವಾಗಿ ಶಿಕ್ಷಕರ ಮೆರವಣಿಗೆ ನಡೆಸಲಾಯಿತು. ಹಳೇ ವಿದ್ಯಾರ್ಥಿಗಳಾದ ಚಾನಾಳು ಚನ್ನಬಸವರಾಜ, ಶಿವಪ್ಪ, ಶ್ರೀಧರ, ಬುಟ್ಟಾ ಮಲ್ಲಿಕಾರ್ಜು, ಆಶಾಪುರ ಮಂಜುನಾಥ, ಆಗಲೂರು ಬಾಬು, ಮಾಳ್ಗಿ ಚಂದ್ರಶೇಖರ, ಬಸವರಾಜ, ಭಾಗ್ಯ, ಗಾಯಿತ್ರಿ. ಕನ್ನಿಕಾ ಪರಮೇಶ್ವರಿ, ವೇದಾವತಿ, ಗೀತಾ, ವನಜಾಕ್ಷಿ ಇದ್ದರು. 
ಜಿಲ್ಲೆ

ಹಿರಿಯರನ್ನು ಗೌರವಿಸುವುದೂ ಶಿಕ್ಷಣ

ಶಾಮಸುಂದರ್ ಕೊಪ್ಪಳಕರ್

ಕುರುಗೋಡು: ಬಾಲ್ಯದಲ್ಲಿ ಶಿಕ್ಷಣ ನೀಡಿದ ಶಿಕ್ಷಕರನ್ನು ವಿದ್ಯಾರ್ಥಿಗಳು ಎಂದಿಗೂ ಮರೆಯಬಾರದು ಎಂದು ನಿವೃತ್ತ ಶಿಕ್ಷಕ ಬಿ.ಎಂ.ಪಂಚಯ್ಯ ಹೇಳಿದರು.

ಪಟ್ಟಣದ ಸರ್ಕಾರಿ ಮಾಹಿಪ್ರಾ ಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆಯಲ್ಲಿ 1982ರಿಂದ 1992ರ ವರಗೆ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ತಾಯಿ, ತಂದೆಯನ್ನು ಎಲ್ಲರೂ ಗೌರವಿಸಬೇಕು. ಶಿಕ್ಷಣ ಎಂದರೆ ಕೇವಲ ಅಕ್ಷರ ಜ್ಞಾನ ಅಲ್ಲ. ಗುರುಹಿರಿಯರನ್ನು ಗೌರವಿಸುವುದು ಶಿಕ್ಷಣವಾಗಿದ್ದು, ಅದನ್ನು ಮನೆಯಲ್ಲಿ ಪಾಲಕರು ಕಲಿಸುತ್ತಾರೆ ಎಂದರು.

ನಿವೃತ್ತ ಶಿಕ್ಷಕ ವೈ.ಹನುಮಂತ ರೆಡ್ಡಿ ಮಾತನಾಡಿ, ಶಿಕ್ಷಕನಾಗಿದ್ದಾಗ ಕುರುಗೋಡಿನಲ್ಲಿ ಆದಿಮಾನವರು ನೆಲೆಸಿರುವ ಕುರುಹುಗಳನ್ನು ಪತ್ತೆಹಚ್ಚಿದ್ದೇವೆ. ಅಪರ ಫಲವಾಗಿ ಕುರುಗೋಡಿನ ಹೆಸರು ಎಲ್ಲೆಡೆ ಪಸರಿಸುವಂತೆ ಆಗಿದೆ ಎಂದರು.

ನಿವೃತ್ತ ಶಿಕ್ಷಕ ಡಿ.ಜಿ.ಶಿವಣ್ಣ ಮಾತನಾಡಿ, ಅಂಕಗಳಿಕೆಯ ಹಿಂದೆ ಬಿದ್ದಿರುವ ವಿದ್ಯಾರ್ಥಿಗಳಲ್ಲಿ ಗುರುವಿನ ಬಗೆಗೆ ಗೌರವ ಕಡಿಮೆಯಾಗುರುವುದು ಉತ್ತಮ ಬೆಳವಣಿಗೆಯಲ್ಲ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ನೀಡಿದ ಗುರುಗಳನ್ನು ಗೌರವಿಸುವ ಪರಿಪಾಟ ಮುಂದುವರಿದಿರುವುದು ಮುಂದಿನ ಪೀಳಿಗೆಗೆ ಉತ್ತಮ ಮಾರ್ಗವಾಗಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದುಕೊಂಡರೆ ಅದೇ ಗುರುಗಳಿಗೆ ನೀಡುವ ಗುರುದಕ್ಷಿಣೆಯಾಗಿದೆ. ಈಚೆಗೆ ಶಿಕ್ಷಕರಿಗೆ ಬೋಧನೆ ಜತೆಗೆ ಇಲಾಖೆಗೆ ದಾಖಲೆಗಳನ್ನು ಒದಗಿಸುವ ಕಾರ್ಯ ಹೆಚ್ಚುತ್ತಿರುವುದರಿಂದ ಶೈಕ್ಷಣಿಕ ಮೌಲ್ಯ ಕುಸಿಯುತ್ತಿದೆ ಎಂದರು.

ದೊಡ್ಡಬಸವೇಶ್ವರ ದೇವಸ್ಥಾನದ ಆವರಣದಿಂದ ಪ್ರಾರಂಭಗೊಂಡ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಎಸ್‌ಎಲ್‌ವಿ ಫಂಕ್ಷನ್‌ಹಾಲ್‌ನಲ್ಲಿ ಸಮಾವೇಶಗೊಂಡಿತು.

ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ, ಪ್ರಮುಖರಾದ ಕೃಷ್ಣರಾವ್, ಶೀಲಾವತಿ, ರಸೂಲ್ ಖಾನ್, ವಿಜಯರಾವ್, ಡಿ.ಜಿ.ಶಿವಣ್ಣ, ಯು.ಸರೋಜಮ್ಮ, ಚಂದ್ರಪ್ಪ, ಪಿ.ಸೋಮಶೇಖರ್, ತಿರುಮಲ್ ರಾವ್, ಎಂ.ಎಸ್.ಉಪ್ಪಿನ್ ಅವರನ್ನು ಸನ್ಮಾನಿಸಲಾಯಿತು.

ಹಳೇ ವಿದ್ಯಾರ್ಥಿಗಳಾದ ಸರಸ್ವತಿ, ಭಾಗ್ಯಮ್ಮ, ನಾಗರತ್ನ, ಬದ್ರಿ, ಓಂಕಾರ, ಗಾಳಿ ಮಲ್ಲಯ್ಯ, ದೊಡ್ಡನಗೌಡ, ನರಸಪ್ಪ ಯಾದವ್, ಚಾನಾಳು ರಾಮಣ್ಣ, ಜೆ.ಮಲ್ಲಿಕಾರ್ಜುನ, ಸುಂಕಪ್ಪ, ಬಿ.ಎಂ.ಮಂಜುನಾಥ, ದೊಡ್ಡಬಸವ ನಂದಿಕೋಲು ಬಸವರಾಜ, ಎಂ.ಬಸವರಾಜ, ಮೌಲಾಸಾಬ್, ಕಲ್ಗುಡೆಪ್ಪ, ಎಸ್‌ಟಿಡಿ ಬಸವರಾಜ, ಗವಾಯಿ, ದೊಡ್ಡನಗೌಡ ಇದ್ದರು.