ಜಿಲ್ಲೆ

ಕೌಲಗಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸಲು ಕುರುಬ ಮುಖಂಡರ ಆಗ್ರಹ


ಕಲಬುರಗಿ: ಕಾಂಗ್ರೆಸ್ ಪಕ್ಷ ದ ಯುವ ಮುಖಂಡರಾದ ನ್ಯಾಯವಾದಿ ಮಹಾಂತೇಶ  ಕೌಲಗಿ ಅವರನ್ನು ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಕುರುಬ ಸಮಾಜ ಹಿರಿಯ ಮುಖಂಡ ಬೈಲಪ್ಪ ನೆಲೋಗಿ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಅವಕಾಶ ಕಲ್ಪಿಸಿಕೊಟ್ಟು ಕುರುಬ  ಮತ್ತು ಹಿಂದುಳಿದ ವರ್ಗಗಳ ಸಮಾಜಕ್ಕೆ ಅವಕಾಶ ಮಾಡಿಕೊಡಬೇಕು ಎಂದು  ಒತ್ತಾಯಿಸಿದರು.
ಹಲವಾರು ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಗೊಂಡ, ಕಾಡು ಕುರುಬ ಸಮುದಾಯದವರಿಗೆ ಜಾತಿ ಪ್ರಮಾಣ ಪತ್ರ ಮತ್ತು ಸಿಂಧುತ್ವ ಪ್ರಮಾಣ ಪತ್ರ ಕೊಡಿಸಲು ಸಾಕಷ್ಟು ಹೋರಾಟ ಮಾಡಿದ್ದಾರೆ. ಮೇಲಾಗಿ ಕಾಂಗ್ರೆಸ್ ಪಕ್ಷ ದ ಸಂಘಟನೆಗೂ ಶ್ರಮಿಸುತ್ತಿದ್ದಾರೆ. ಹೀಗಾಗಿ ಅವಕಾಶ ನೀಡಬೇಕು  ಪಕ್ಷದ ವರಿಷ್ಠರಿಗೆ, ಸಿಎಂ ಹಾಗೂ ಸಚಿವರಿಗೆ ಎಂದು ಬೈಲಪ್ಪ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಯಶವಂತ ಯಾತನೂರ, ನಿಂಗಪ್ಪ ಹೇರೂರ, ಶರಣಪ್ಪ ಕೆಸರಟಗಿ, ಮಾನಪ್ಪ ಪೂಜಾರಿ, ಶಿವರಾಜ ವಕೀಲ ಇತರರಿದ್ದರು.