ಕುರುಗೋಡಿನಲ್ಲಿ ವಿಶ್ವ ರೇಬಿಸ್ ದಿನದ ಪ್ರಯುಕ್ತ ಜನರಿಗೆ ಕರಪತ್ರಗಳನ್ನು ಹಂಚಿ ಜಾಗೃತಿ ಮೂಡಿಸಲಾಯಿತು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಮಂಜುನಾಥ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶರಣ ಬಸವ, ಮಹೇಂದ್ರ, ಆಶಾ ಕಾರ್ಯಕರ್ತೆಯರಾದ ರಾಜೇಶ್ವರಿ, ಹಂಪಮ್ಮ, ಕೆ.ರಾಜೇಶ್ವರಿ ಇದ್ದರು. 
ಜಿಲ್ಲೆ

ನಾಯಿ ಕಚ್ಚಿದಾಗ ನೌಟಿ ಔಷಧ ಬಳಸದಿರಿ

ಕುರುಗೋಡು: ನಾಯಿ ಕಚ್ಚಿದಾಗ ನಾಟಿ ಔಷಧ ಬಳಸದೆ ವೈದ್ಯರ ಸಲಹೆ ಪಡೆಯಬೇಕು ಎಂದು ಹಿರಿಯ ಅರೋಗ್ಯ ನಿರೀಕ್ಷಣಾಧಿಕಾರಿ ಕೆ.ಮಂಜುನಾಥ ಹೇಳಿದರು.

ದೊಡ್ಡಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ವೇಕ್ಷಣಾ ಘಟಕ, ಸಮುದಾಯ ಅರೋಗ್ಯ ಕೇಂದ್ರ ನೇತೃತ್ವದಲ್ಲಿ ವಿಶ್ವ ರೇಬಿಸ್ ದಿನದ ಪ್ರಯುಕ್ತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರೇಬಿಸ್ ಮಾರಣಾಂತಿಕ ಕಾಯಿಲೆ. ನಿರ್ಲಕ್ಷ್ಯ ಮಾಡದೆ ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಂಡು ಪ್ರಾಣ ಉಳಿಸಿಕೊಳ್ಳಿ.

ನಾಯಿ, ಬೆಕ್ಕು ಅಥವಾ ಯಾವುದೇ ಪ್ರಾಣಿಗಳು ಕಚ್ಚಿದಾಗ ತಕ್ಷಣ 15 ನಿಮಿಷದೊಳಗೆ ಕಾರ್ಬೋಲಿಕ್ ಸೋಪು, ಡೆಟಾಲ್ ಸೋಪು ಅಥವಾ ಬಟ್ಟೆ ಸೋಪುಗಳಿಂದ ಚೆನ್ನಾಗಿ ತೊಳೆಯಬೇಕು, ನಂತರದಲ್ಲಿ ನೀರನ್ನು ಬಿಟ್ಟು ಕನಿಷ್ಠ 2ರಿಂದ 3 ನಿಮಿಷ ತೊಳೆದರೆ ವೈರಸ್ ಕಡಿಮೆ ಆಗುತ್ತದೆ ಎಂದರು. ಆಶಾ ಕಾರ್ಯಕರ್ತೆಯರಾದ ಗೀತಾ, ನೀಲಮ್ಮ, ಉಮಾದೇವಿ ಇತರರಿದ್ದರು.