ಜಿಲ್ಲೆ

ತುಳುನಾಡಿನ ವಿಭಿನ್ನ ಸಂಸತಿ ಹಿರಿಯರ ಕೊಡುಗೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ತುಳುನಾಡು ವಿಶಿಷ್ಟ ಪ್ರದೇಶವಾಗಿದ್ದು, ಇಲ್ಲಿನ ವಿಭಿನ್ನ ಸಂಸತಿ ಭಾಷೆ, ಆಚಾರ&ವಿಚಾರ, ಸಂಪ್ರದಾಯ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ನಾಗಾರಾಧನೆ, ಭೂತಾರಾಧನೆ, ಕೋಲ, ಜಾತ್ರೆಗಳು ಹಿರಿಯರ ಕೊಡುಗೆಗಳಾಗಿದ್ದು, ಇದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಮಣಿಪಾಲ ಸಂಗಮ ಕಲಾವಿದೆರ್​ ಆಶ್ರಯದಲ್ಲಿ ಕುಂಜಿಬೆಟ್ಟುವಿನ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ಪದವಿ ವಿದ್ಯಾರ್ಥಿಗಳಿಗಾಗಿ ನಡೆದ "ಕುರಲ್​'- ತುಳು ಸಾಹಿತ್ಯ ಸಾಂಸತಿಕ ಪರ್ಬ ಉದ್ಘಾಟಿಸಿ ಮಾತನಾಡಿದರು.

ಪಾಡ್ದನ, ಭೂತಾರಾಧನೆ ಜಾನಪದ ಸಂಸತಿಯ ಭಾಗವಾಗಿದ್ದು, ಇದರಿಂದ ನೆಲದ ಸೊಗಡನ್ನು ತಿಳಿದುಕೊಳ್ಳಲು ಸಾಧ್ಯ. ವಿದ್ಯಾಭ್ಯಾಸ, ಉದ್ಯೋಗ ನಿಮಿತ್ತ ಯುವಜನರು ದೂರದೂರುಗಳಿಗೆ ತೆರಳುತ್ತಿದ್ದು, ಸ್ಥಳಿಯ ಸಂಸತಿಯಿಂದ ವಿಮುಖರಾಗುತ್ತಿರುವ ಸಮಯದಲ್ಲಿ ಇಂಥ ಕಾರ್ಯಕ್ರಮಗಳಿಂದ ಮುಂದಿನ ಪೀಳಿಗೆಗೆ ಅರಿವು ಮೂಡಿಸಬಹುದು ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ್​ ಗಟ್ಟಿ ಕಾಪಿಕಾಡ್​ ಸಭಾಧ್ಯಕ್ಷತೆ ವಹಿಸಿ, ಭಾಷೆ ಎಂದರೆ ಸಂಸತಿ. ಭಾಷೆ ಉಳಿದರೆ ಮಾತ್ರ ಸಂಸತಿಯೂ ಜೀವಂತವಾಗಿರಲು ಸಾಧ್ಯ. ತುಳು ಸಾಹಿತ್ಯ ಪರಂಪರೆ ವಿಶಿಷ್ಟವಾಗಿದ್ದು, ಪ್ರಬಂಧ, ಕವಿತೆ, ಕಾವ್ಯ, ನಾಟಕ ಹೀಗೆ ಎಲ್ಲಾ ಪ್ರಕಾರಗಳ ಸಾಹಿತ್ಯಗಳೂ ಲಭ್ಯ ಇವೆ. ಈ ಎಲ್ಲಾ ಜ್ಞಾನ ಭಂಡಾರಗಳ ದಾಖಲೀಕರಣ ಅಕಾಡೆಮಿ ವತಿಯಿಂದ ನಡೆದಿದೆ. ತುಳು ನಾಡಿನಲ್ಲಿ 16 ಬಗೆಯ ವೈವಿಧ್ಯಮಯ ಕ್ರೀಡೆಗಳಿವೆ ಎಂಬ ಉಲ್ಲೇಖವಿದೆ. ಹೀಗಾಗಿ ಶ್ರೀಮಂತ ಪರಂಪರೆ ಹೊಂದಿರುವ ತುಳು ಭಾಷೆ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮನೆಯಲ್ಲಿ ಕಡ್ಡಾಯವಾಗಿ ತುಳುವಿನಲ್ಲೇ ಮಾತಾಡುವ ಪರಿಪಾಠ ಬೆಳೆಸಿಕೊಳ್ಳಬೇಕು. ಭಾಷೆ ಉಳಿಯಬೇಕಾದರೆ ಅದನ್ನು ಬಳಕೆ ಮಾಡಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಅಕಾಡೆಮಿ ರಿಜಿಸ್ಟ್ರಾರ್​ ಪೂರ್ಣಿಮಾ, ಸದಸ್ಯ ಉದ್ಯಾವರ ನಾಗೇಶ್​ ಕುಮಾರ್​, ಬಾಬು ಕೊರಗ ಪಾಂಗಾಳ, ಸಂಗಮ ಕಲಾವಿದೆರ್​ ಸಂಸ್ಥೆಯ ಶ್ರೇಯಸ್​ ಕೋಟ್ಯಾನ್​, ರಾಘವೇಂದ್ರ ನಾಯ್ಕ್​, ಆನಂದ್​ ನಾಯ್ಕ್​ ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯ ಸಂತೋಷ್​ ಶೆಟ್ಟಿ ಹಿರಿಯಡ್ಕ ಸ್ವಾಗತಿಸಿ, ಸುಚಿತ್​ ಕೋಟ್ಯಾನ್​ ಕಾರ್ಯಕ್ರಮ ನಿರೂಪಿಸಿದರು. ನಡೆಯಿತು. ತುಳು ಪರ್ಬದಲ್ಲಿ ನವೋದಯ ಸಾಂಸತಿಕ ಕಲಾತಂಡ ಪಾಂಬೂರು ಇವರಿಂದ ಡೋಲು ಪ್ರಾತ್ಯಕ್ಷಿಕೆ, "ಸೊತ ಬರೆಯಿ ಕಬಿತೆದ ಓದು, ಭಾಷಣ ಪಂತ, ತುಳು ಪದ ಕೊಲ್ಕೆ, ತುಳು ನಲಿಕೆ, ತುಳುನಾಡ ತುತೆದ ಪೊರ್ಲ ತೂಪರಿಕೆ, ಫೋಟ್ರೋಗ್ರಫಿ ಸ್ಪರ್ಧೆ ನಡೆಯಿತು.