ಗಜೇಂದ್ರಗಡ: ತಾಲೂಕಿನ ಕುಂಟೋಜಿ ಗ್ರಾಪಂಗೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ಪೂನವ್ವ ನೇಮಪ್ಪ ರಾಠೋಡ ಹಾಗೂ ಉಪಾಧ್ಯಕ್ಷರಾಗಿ ಚನ್ನವ್ವ ವೆಂಕಪ್ಪ ಅಜಮೀರ ಆಯ್ಕೆಯಾದರು.
ಒಟ್ಟು 13 ಗ್ರಾಪಂ ಸದಸ್ಯ ಬಲದ ಕುಂಟೋಜಿ ಗ್ರಾಪಂಗೆ ಮಂಗಳವಾರ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪೂನವ್ವ ನೇಮಪ್ಪ ರಾಠೋಡ, ದ್ಯಾಮವ್ವ ಹನುಮಂತ ರಾಠೋಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚನ್ನವ್ವ ವೆಂಕಪ್ಪ ಅಜಮೀರ, ಲಿಂಬಣ್ಣ ಮುನಿಯಪ್ಪ ಲಮಾಣಿ ನಾಮಪತ್ರ ಸಲ್ಲಿಸಿದ್ದರು.
ಪೂನವ್ವ ನೇಮಪ್ಪ ರಾಠೋಡ 10 ಮತ ಪಡೆದರೆ, ದ್ಯಾಮವ್ವ ಹನುಮಂತ ರಾಠೋಡ 3 ಮತ ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದವರ ಪೈಕಿ ಚನ್ನವ್ವ ವೆಂಕಪ್ಪ ಅಜಮೀರ 8 ಮತ ಪಡೆದರೆ, ಲಿಂಬಣ್ಣ ಮುನಿಯಪ್ಪ ರಾಠೋಡ 5 ಮತ ಸೋಲು ಅನುಭವಿಸಿದರು. ಐದು ಜನ ಬಿಜೆಪಿ ಬೆಂಬಲಿತ ಸದಸ್ಯರ ಬೆಂಬಲ ಪಡೆಯುವ ಮೂಲಕ ಪೂನವ್ವ , ಚನ್ನವ್ವ ಅಧಿಕಾರದ ಗದ್ದುಗೆ ಏರುವಲ್ಲಿ ಯಶಸ್ವಿಯಾದರು.
ಚುನಾವಣಾಧಿಕಾರಿಯಾಗಿ ತಾಪಂ ಇಒ ಡಾ.ಡಿ. ಮೋಹನ ಕಾರ್ಯನಿರ್ವಹಿಸಿದರು. ಪಿಡಿಒ ಮಹಾಂತೇಶ ತಳವಾರ, ವೀರೇಶ ರಾಠೋಡ, ಕೃಷ್ಣಪ್ಪ ರಾಠೋಡ, ಶಿವಪ್ಪ ರಾಠೋಡ, ಈರಪ್ಪ ರಾಠೋಡ, ಶೇಖಪ್ಪ ಪೂಜಾರ, ಉಮೇಶ ರಾಠೋಡ, ಉಮೇಶ ಪೂಜಾರ, ಶಿವು ಚವ್ಹಾಣ, ವೆಂಕಪ್ಪ ಅಜಮೀರ, ಕುಮಾರೆಪ್ಪ ರಾಠೋಡ, ಸುರೇಶ ಮಾಳೋತ್ತರ, ಶರಣಪ್ಪ ಅವಾರಿ, ಈಶಪ್ಪ ರಾಠೋಡ, ಸಕ್ರಪ್ಪ ಅಮರಗಟ್ಟಿ, ಶಿವು ರಾಠೋಡ, ತಾರಾಸಿಂಗ್ ರಾಠೋಡ, ಶರಣಪ್ಪ ರಾಠೋಡ, ಶರಣಪ್ಪ ರಾಠೋಡ, ಕುಮಾರ ಹಿರೇಮಠ, ಶರಣಯ್ಯ ಕುಷ್ಟಗಿ ಅಜ್ಜಪ್ಪ ಕೌಡಕಿ ಇತರರು ಇದ್ದರು.