ಜಿಲ್ಲೆ

ಪ್ರಾಥಮಿಕ ಶಾಲಾ ಶಿಕ್ಷಕ ಶಿಕ್ಷಕಿಯರ ಪತ್ತಿನ ಸಹಕಾರಿ ಸಂಘಕ್ಕೆ ಕುಂಕೂರ ಅಧ್ಯಕ್ಷ

ಶಿಗ್ಗಾಂವಿ: ಶಿಗ್ಗಾಂವಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕ ಶಿಕ್ಷಕಿಯರ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಎಚ್.ಡಿ. ಕುಂಕೂರ, ಉಪಾಧ್ಯಕ್ಷರಾಗಿ ಜೆಬಿವುಲ್ಲಾ ಗಂಗನಕೋಟಿ ಆಯ್ಕೆಯಾದರು.

ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕ, ಶಿಕ್ಷಕಿಯರ ಪತ್ತಿನ ಸಹಕಾರಿ ಸಂಘದ 15 ಸದಸ್ಯರ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿ.ಬಿ. ಕಟ್ಟಿಮನಿ ಮತ್ತು ಎಚ್.ಡಿ. ಕುಂಕೂರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ಸಿ. ಹಿರೇಮಠ ಮತ್ತು ಜೆಬಿವುಲ್ಲಾ ಗಂಗನಕೋಟಿ ನಾಮಪತ್ರ ಸಲ್ಲಿಸಿದ್ದರು.

ಎಚ್.ಡಿ. ಕಂಕೂರ, ಜೆಬಿವುಲ್ಲಾ ಗಂಗನಕೋಟಿ ತಲಾ 8 ಮತ ಪಡೆಯುವ ಮೂಲಕ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದರು. ಸವಣೂರು ಉಪವಿಭಾಗದ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಎಸ್.ಜಿ. ಸುಣಗಾರ ಚುನಾವಣೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.