ಉಡುಪಿ: ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ಎಂಬಲ್ಲಿ ಇತ್ತೀಚಿಗೆ ಮನೆಗೆ ನುಗ್ಗಿ 3.48 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಶಿವಮೊಗ್ಗ ಮೂಲದ ಕಳ್ಳನನ್ನು ಬಂಧಿಸಿದ್ದಾರೆ.
ಶಿವಮೊಗ್ಗ ತಾಲೂಕು ರಾಮನಗರ ಗ್ರಾಮದ ಹಾರನಹಳ್ಳಿ ನಿವಾಸಿ ಸಾಧಿಕ್ ಉಲ್ಲಾ (35 ವರ್ಷ) ಬಂಧಿತ ಆರೋಪಿ. ಆರೋಪಿ ಶಿಕಾರಿಪುರದ ಬಾಡಿಗೆ ಮನೆಯಲ್ಲಿ ಇಟ್ಟಿದ್ದ ಕಳವು ಮಾಡಿಕೊಂಡು ಹೋಗಿದ್ದ ಒಟ್ಟು ರೂ. 4,35,325 ರೂಪಾಯಿ ಮೌಲ್ಯದ ಡೈಮಂಡ್ ಉಂಗುರ, ಚಿನ್ನಾಭರಣ, ಬೆಳಿಯ ಗಟ್ಟಿ, ಬೆಳ್ಳಿಯ ಆಭರಣ ಮತ್ತು ಚಿನ್ನದ ಲೇಪನ ಇರುವ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.