ಕುಣಿತ ಭಜನೆ ಸ್ಪರ್ಧೆಯಲ್ಲಿ ಪಣಂಬೂರು - ಕುಳಾಯಿ ಘಟಕ ಪ್ರಥಮ, ಕೂಳೂರು ಘಟಕ ದ್ವಿತೀಯ, ಸುರತ್ಕಲ್ ಘಟಕ ತೃತೀಯ ಬಹುಮಾನ ತನ್ನದಾಗಿಸಿಕೊಂಡಿತು 
ಜಿಲ್ಲೆ

ಕುಣಿತ ಭಜನಾ ಸ್ಪರ್ಧೆಯಲ್ಲಿ ಯುವವಾಹಿನಿ ಪಣಂಬೂರು - ಕುಳಾಯಿ ಘಟಕ ಪ್ರಥಮ

ಇಂದಿರಾ ಎನ್ ಕೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಯುವವಾಹಿನಿ ಮಂಗಳೂರು ಮಹಿಳಾ ಘಟಕ ಆತಿಥ್ಯದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಆಯೋಜಿಸಲಾದ ‘ಕುಣಿದು ಭಜಿಸಿರೋ ಭಾವ - ಗಾನ’ ಅಂತರ್ ಘಟಕ ಕುಣಿತ ಭಜನೆ ಸ್ಪರ್ಧೆಯಲ್ಲಿ ಪಣಂಬೂರು - ಕುಳಾಯಿ ಘಟಕ ಪ್ರಥಮ, ಕೂಳೂರು ಘಟಕ ದ್ವಿತೀಯ, ಸುರತ್ಕಲ್ ಘಟಕ ತೃತೀಯ ಬಹುಮಾನ ತನ್ನದಾಗಿಸಿಕೊಂಡಿತು. ಕಾರ್ಕಳ ಘಟಕ ಉತ್ತಮ ಭಜಕ, ಮೂಲ್ಕಿ ಘಟಕ ಉತ್ತಮ ತಬಲವಾದಕ, ಕೂಳೂರು ಘಟಕ ಉತ್ತಮ ಹಾರ್ಮೋನಿಯಂ ವಾದಕ ಬಹುಮಾನ ಪಡೆಯಿತು. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಎಸ್.ಸಾಯಿರಾಮ್ ಭಜನಾ ಸ್ಪರ್ಧೆ ಉದ್ಘಾಟಿಸಿದರು.

ಸಮಾರೋಪ

ಸಮಾರೋಪ ಸಮಾರಂಭದಲ್ಲಿ ಚಿಲಿಂಬಿ ಸಾಯಿಬಾಬಾ ಮಂದಿರ ಮೊಕ್ತೇಸರ ವಿಶ್ವಾಸ್‌ದಾಸ್ ಮಾತನಾಡಿ, ಯುವಶಕ್ತಿ ದೇಶದ ಪ್ರಬಲ ಶಕ್ತಿ. ಈ ನಿಟ್ಟಿನಲ್ಲಿಯುವಜನತೆಯಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಪ್ರಜ್ಞೆ ಮೂಡಿಸುವಲ್ಲಿ ಯುವವಾಹಿನಿ ಸಂಸ್ಥೆಯ ಪಾತ್ರ ಶ್ಲಾಘನೀಯ ಎಂದರು.
ಯುವವಾಹಿನಿಯು ಸಮಯಪ್ರಜ್ಞೆ ಹಾಗೂ ಶಿಸ್ತು ಇತರರಿಗೆ ಮಾದರಿ ಎಂದು ಕುಮಾರ್ ಪೂಜಾರಿ ಹೇಳಿದರು.

ಕೆ.ಜಾಹ್ನವಿ ಆರ್.ಪೂಜಾರಿ, ವಿಜಯಲಕ್ಷ್ಮೀಮಧುಕರ ಮಲ್ಲಿ ಶುಭಹಾರೈಸಿದರು. ಡೆನ್ನಾನ ಡೆನ್ನನ 2024 ಯುವವಾಹಿನಿ ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆಯ ಆಮಂತ್ರಣ ಪತ್ರ ಈ ಸಂದರ್ಭ ಬಿಡುಗಡೆಗೊಳಿಸಲಾಯಿತು. ಧಾರ್ಮಿಕ ಕ್ಷೇತ್ರದ ಅನನ್ಯ ಸೇವೆಗಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಸೇವಾದಳವನ್ನು ಗೌರವಿಸಲಾಯಿತು.

ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಕೆ.ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಲೋಕೇಶ್ ಕೋಟ್ಯಾನ್ ವಿಜೇತರ ವಿವರ ಪ್ರಕಟಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಕಲೆ ಮತ್ತು ಸಾಹಿತ್ಯ ನಿರ್ದೇಶಕಿ ನಯನಾ ರಮೇಶ್, ಯುವವಾಹಿನಿ ಮಂಗಳೂರು ಮಹಿಳಾ ಘಟಕ ಕಾರ್ಯದರ್ಶಿ ಅಮಿತಾ ಗಣೇಶ್, ಮಹಿಳಾ ಘಟಕದ ಕಲೆ ಮತ್ತು ಸಾಹಿತ್ಯ ನಿರ್ದೇಶಕಿ ಶಾಲಿನಿ ಯಶವಂತ್ ಉಪಸ್ಥಿತರಿದ್ದರು. ಮಂಗಳೂರು ಮಹಿಳಾ ಘಟಕ ಅಧ್ಯಕ್ಷೆ ಶುಭಾರಾಜೇಂದ್ರ ಸ್ವಾಗತಿಸಿದರು. ಸಂಚಾಲಕಿ ರಶ್ಮಿ ಸಿ.ಕರ್ಕೇರ ಪ್ರಸ್ತಾವನೆಗೈದರು. ಸಚ್ಚೇಂದ್ರ ಅಂಬಾಗಿಲು ಕಾರ್ಯಕ್ರಮ ನಿರೂಪಿಸಿದರು. ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ ವಂದಿಸಿದರು. ಶೋಭಾ ಐತಾಳ್, ವಿಜಯಲಕ್ಷ್ಮೀ ಕಟೀಲ್, ಸಚಿನ್ ಸುವರ್ಣ ತೀರ್ಪುಗಾರರಾಗಿದ್ದರು.