ಜಿಲ್ಲೆ

ತುಮಕೂರಿನಲ್ಲೇ ಕುಣಿಗಲ್​ ಉಳಿಯಲಿ

ತುಮಕೂರು ಡೆಸ್ಕ್

ಕುಣಿಗಲ್: ತುಮಕೂರು ಜಿಲ್ಲೆಯಲ್ಲಿಯೇ ಕುಣಿಗಲ್​ ತಾಲೂಕು ಉಳಿಯಬೇಕು. ಬೆಂಗಳೂರು ದಣ ಜಿಲ್ಲೆಗೆ ಯಾವುದೇ ಕಾರಣಕ್ಕೂ ವರ್ಗಾಯಿಸಬಾರದೆಂದು ಆಗ್ರಹಿಸಿ ಕುಣಿಗಲ್​ ತಾಲೂಕಿನ ವಿವಿಧ ಸಂ& ಸಂಟನೆಗಳು, ಹೋರಾಟಗಾರರು, ಬಿಜೆಪಿ, ಜೆಡಿಎಸ್​ ಸೇರಿ ವಿವಿಧ ಪಗಳ ಮುಖಂಡರಿಂದ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್​ ಭವನದಲ್ಲಿ ಸಭೆ ಹಮ್ಮಿಕೊಳ್ಳಲಾಗಿತ್ತು.

ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್​ ಮಾತನಾಡಿ, ಬೆಂಗಳೂರು ದಣ ಜಿಲ್ಲೆಗೆ ಕುಣಿಗಲ್​ ಸೇರ್ಪಡೆಗೊಂಡರೆ ಈಗಿನ ರಾಜಕಾರಣಿಗಳ ಕುಮ್ಮಕ್ಕಿನಿಂದ ರಿಯಲ್​ ಎಸ್ಟೇಟ್​ ದಂಧೆ ನಿರಾಳವಾಗಿ ಮಾಡಬಹುದೆಂಬ ದುರಾಸೆಯಿಂದ ಈ ಭಾಗದ ಶಾಸಕರ ಕುಮ್ಮಕ್ಕಿನ ಲ ಬೆಂಗಳೂರು ವಾಸವಾಗಿರುವ ಆನಿವಾಸಿ ಜನರಿಗೆ ಒಂದು ನಾಲ್ಕು ಐದು ಜನ ಕುಳಿತು ಸಭೆ ಮಾಡಿ ಅವರ ಅನುಕೂಲಕ್ಕೆ ಮತ್ತು ರಾಜಕಾರಣಿಗಳ ಅನುಕೂಲಕ್ಕೆ ಕುಣಿಗಲ್​ ತಾಲೂಕನ್ನು ತುಮಕೂರು ಜಿಲ್ಲೆಯಿಂದ ಬೇರ್ಪಡಿಸಿ ಬೆಂಗಳೂರು ದಣ ಜಿಲ್ಲೆಗೆ ವರ್ಗಾಯಿಸಿ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಪಂ ಮಾಜಿ ಅಧ್ಯ ವೆ.ಎಚ್​.ಹುಚ್ಚಯ್ಯ ಮಾತನಾಡಿ, ಇದು ರಾಜಕೀಯ ಹೇಡಿತನ ಕುತಂತ್ರ ಮಾಡುತ್ತಿರುವವರಿಗೆ ತಕ್ಕ ಪಾಠ ಕಲಿಸಬೇಕು. ತುಮಕೂರು ಜಿಲ್ಲೆಯೇ ಕುಣಿಗಲ್​ ಕಿರೀಟಮಯವಾಗಿದೆ. ಅಭಿವದ್ಧಿಯಲ್ಲಿ ಮುಂದಿದೆ ಅಭಿವದ್ಧಿಪಡಿಸುವುದಾದರೆ ಇಲ್ಲಿಯ ಅಭಿವೃದ್ಧಿಪಡಿಸಲಿ ಯಾವುದೇ ಕಾರಣಕ್ಕೂ ಕುಣಿಗಲ್​ ತಾಲೂಕನ್ನು ರಾಮನಗರ ಜಿಲ್ಲೆಗೆ ವರ್ಗಾಯಿಸಕೂಡದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ಪತ್ರ ನೀಡುವ ಕೆಲಸ ಮಾಡಬೇಕೆಂದು ತೀರ್ಮಾನ ಕೆಗೊಳ್ಳಲಾಯಿತು.

ವಕೀಲರ ಸಂದ ಅಧ್ಯ ಸಿಂಗ್ರಯ್ಯ, ವಕೀಲರಾದ ಕೆ.ಎಂ ತಿಮ್ಮಪ್ಪ, ಶಿವರಾಂ, ಆಮ್​ ಆದ್ಮಿ ಪದ ಜಯರಾಮಯ್ಯ, ಕಸಾಪ ಮಾಜಿ ಅಧ್ಯ ದಿನೇಶ್​ ಕುಮಾರ್​, ಚಿಂತಕ ಹೋರಾಟಗಾರ ಜಿಕೆ ನಾಗಣ್ಣ, ಜಿಪಂ ಮಾಜಿ ಸದಸ್ಯ ಶಿವಣ್ಣ, ಮಾಜಿ ಪುರಸಭಾ ಅಧ್ಯ ಹರೀಶ್​, ಬಿ.ಎಂ.ಹುಚ್ಚೇಗೌಡ. ನಿಡುಸಾಲೆ ಪ್ರಸಾದ್​ ಇದ್ದರು.