ಜಿಲ್ಲೆ

ತಿಂಗಳ ಬಳಿಕ ಕುಣಿಗಲ್​ ಅಂಡರ್​ಪಾಸ್​ ಸಾರ್ವಜನಿಕ ಸಂಚಾರಕ್ಕೆ ಮುಕ್ತ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಕಳೆದೊಂದು ತಿಂಗಳಿನಿಂದ ಬಂದ್​ ಆಗಿದ್ದು ಕುಣಿಗಲ್​ ರೈಲ್ವೆ ಕೆಳಸೇತುವೆ ದುರಸ್ತಿ ಕಾರ್ಯ ಪೂರ್ಣಗೊಂಡು ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿದೆ. ಮೇ 24ರಿಂದ ಈ ರಸ್ತೆಯಲ್ಲಿ ವಾಹನ ನಿರ್ಬಂಧ ಹೇರಲಾಗಿದ್ದು ಗುರುವಾರದಿಂದ ವಾಹನ ಸಂಚಾರ ಪುನರಾರಂಭಗೊಂಡಿವೆ.

ಮಳೆಗಾಲ ಬಂತೆಂದರೆ ಹಾಳಾಗುತ್ತಿದ್ದ ಕುಣಿಗಲ್​ ರೈಲ್ವೆ ಅಂಡರ್​ ಪಾಸ್​ ರಸ್ತೆ ದುರಸ್ತಿಯನ್ನು ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ. ಜಿ. ಪರಮೇಶ್ವರ್​ ಚಾಲನೆ ನೀಡಿದ್ದಲ್ಲದೆ 1 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಖಡಕ್​ ಸೂಚನೆ ಕೊಟ್ಟಿದ್ದರು. ಅದರಂತೆ 40 ದಿನದೊಳಗೆ ಅಂಡರ್​ಪಾಸ್​ ರಿಪೇರಿ ಕಾಮಗಾರಿ ಪೂರ್ಣಗೊಳಿಸಲಾಯಿತು. ಸುಮಾರು ವರ್ಷಗಳಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದು ಪ್ರತಿನಿತ್ಯ ಸಂಚರಿಸಲು ಪರದಾಡುತ್ತಿದ್ದರು. ಅದರಲ್ಲು ಮಳೆ ಬಂದಾಗಲಂತೂ ತುಂಬಾ ಕಿರಿಕಿರಿ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಅಂಡರ್​ಪಾಸ್​ ರಸ್ತೆ, ಚರಂಡಿ ವ್ಯವಸ್ಥೆ, ಫುಟ್​ಪಾತ್​ ಹಾಗೂ ರೈಲಿಂಗ್ಸ್​ ನವೀಕರಣ ಕಾಮಗಾರಿಯನ್ನು ಕೈಗೊತ್ತಿಕೊಳ್ಳಲಾಗಿತ್ತು.