ಜಿಲ್ಲೆ

ಆತ್ಮನಿರ್ಭರ ಭಾರತ ಯೋಜನೆಯಿಂದ ಸ್ವಾತಂತ್ರ್ಯಕ್ಕೆ ಮಹತ್ವ: ಅದಮಾರು ಶ್ರೀ

ಗೋಪಾಲಕೃಷ್ಣ ಪಾದೂರ್

ಉಡುಪಿ: ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ದೇವಸ್ಥಾನದ ಆಡಳಿತದಾರ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಧ್ವಜಾರೋಹಣ ಮಾಡಿದರು.

ಬಳಿಕ ಸಂದೇಶ ನೀಡಿದ ಅವರು, ಸ್ವಾತಂತ್ರ್ಯ ಸಿಕ್ಕಿ ಇಷ್ಟು ಸಮಯವಾದರೂ ನಾವು ಪರಾತಂತ್ರರಾಗಿದ್ದೆವು. ದೇಶಕ್ಕೆ ಬೇಕಾದ ಕೆಲವು ಸರಕುಗಳಿಗೆ ಪರದೇಶಗಳನ್ನೇ ಅವಲಂಭಿಸಿದ್ದೆವು. ಆದರೆ ಪ್ರಸ್ತುತ ಸರಕಾರ ಆತ್ಮನಿರ್ಭರ ಭಾರತ ಯೋಜನೆಯ ಮೂಲಕ ನಮ್ಮ ದೇಶವನ್ನು ಪರದೇಶಗಳು ಅವಲಂಭನೆ ಮಾಡುವಂತೆ ಸಾಧನೆ ಮಾಡಿದೆ. ಈ ಸಾಧನೆಯನ್ನು ಉಳಿಸುವಲ್ಲಿ ಪ್ರತಿಯೊಬ್ಬ ಭಾರತೀಯರು ಕೈಜೋಡಿಸಬೇಕೆಂದು ಸಂದೇಶ ನೀಡಿದರು.

ಮುಖ್ಯ ಅತಿಥಿಗಳಾಗಿ ಶಿರ್ವ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷ ಸುಂದರ ಪ್ರಭು, ವಕೀಲ ರಾಮಚಂದ್ರ ಅಡಿಗರು ಭಾಗವಹಿಸಿದ್ದರು. ದೇವಸ್ಥಾನದ ಮೆನೇಜರ್​ ರಾಜೇಂದ್ರ ರಾವ್​, ಅರ್ಚಕರಾದ ಗೋಪಾಲಕೃಷ್ಣ ಭಟ್​, ಪರಶುರಾಮ ದೇವಸ್ಥಾನದ ಅರ್ಚಕ ವಿನಯಾಪ್ರಸಾದ್​ ಭಟ್​, ಪರಶುರಾಮ ಭಜನಾ ಮಂಡಳಿಯಯ ಕುಳೆದು ಪ್ರಶಾಂತ ಶೆಟ್ಟಿ, ಕುರ್ಕಾಲು ಸುಮಾ ಶೆಟ್ಟಿ, ಕುರ್ಕಾಲು ವಿಶ್ವನಾಥ ಪೂಜಾರಿ ಭಾಗವಹಿಸಿದ್ದರು. ಅರ್ಚಕ ರಾಘವೇಂದ್ರ ಭಟ್​ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.