ವಿಜಯವಾಣಿ ಸುದ್ದಿಜಾಲ ಬೈಂದೂರು
ಕುಂದ್ರಾಪ ಕನ್ನಡ ಅದು ಕೇವಲ ಭಾಷೆ ಮಾತ್ರವಲ್ಲ ನಮ್ಮೆಲ್ಲರ ಬದುಕಾಗಿದೆ. ನಮ್ಮ ಮಾತೃಭಾಷೆ ಮೇಲಿನ ಪ್ರೀತಿ, ಮಮತೆಗಾಗಿ ನಮ್ಮ ಸಂಸ್ಕೃತಿ, ಸಂಪ್ರದಾಯ, ಒತ್ತು ಕೊಡುವ ಚಟುವಟಿಕೆಗಳ ಆಚರಣೆಗಳ ಮೂಲಕ ಬಾಂಧವ್ಯವನ್ನು ವೃದ್ಧಿಸಿಕೊಂಡು ಎಲ್ಲ ಆಯಾಮಗಳಲ್ಲಿಯೂ ಪ್ರಗತಿ ಸಾಧಿಸಬೇಕಿದೆ. ಅದಕ್ಕಾಗಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕರ್ನಾಟಕ ಕಾರ್ಮಿಕ ಪರಿಷತ್ ಅಧ್ಯಕ್ಷ ಡಾ.ರವಿ ಶೆಟ್ಟಿ ಹೇಳಿದರು.
ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಸಂಸ್ಥೆ ಯಡ್ತರೆ ನೆಲ್ಯಾಡಿ ಬೈಲಿನಲ್ಲಿ ಭಾನುವಾರ ಆಯೋಜಿಸಿದ ಕೆಸರುಗದ್ದೆ ಕ್ರೀಡಾಕೂಟ ಗಮ್ಮತ್ತ್ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು.
ಕರಾವಳಿಯ ಚುರುಕುತನ ಹಾಗೂ ಪಶ್ಚಿಮ ಘಟ್ಟ ಭಾಗದ ನಯವಂತಿಕೆ ಕುಂದಾಪ್ರ ಕನ್ನಡಿಗರಲ್ಲಿ ಬೆರೆತಿದ್ದು, ವಿಶ್ವಾಾದ್ಯಂತ ಉದ್ಯಮ ಹಾಗೂ ಕಲಾ ಜಗತ್ತಿನ ಮೂಲಕ ಹೆಸರು ಮಾಡಲು ಸಾಧ್ಯವಾಗಿದೆ. ಭಾಷೆಯ ಕಾರಣದಿಂದಾಗಿ ವಿಶ್ವದ ಎಲ್ಲಿಗೇ ಹೋದರೂ ಅವಿಭಜಿತ ಕುಂದಾಪುರದವರನ್ನು ಗುರುತಿಸುತ್ತಾರೆ ಎಂದು ಅವರು ಹೇಳಿದರು.
ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಶರತ್‌ಕುಮಾರ್ ಶೆಟ್ಟಿ ಉಪ್ಪುಂದ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಜಿಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ಮಾಜಿ ಸದಸ್ಯರಾದ ಸುರೇಶ ಬಟ್ವಾಡಿ, ಎಸ್.ಮದನಕುಮಾರ್, ತಾಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ, ಉಪ್ಪುಂದ ಗ್ರಾಪಂ ಸದಸ್ಯ ಶೇಖರ ಪೂಜಾರಿ, ಕತಾರ್ ಕರ್ನಾಟಕ ಸಂಘದ ಸುಬ್ರಹ್ಮಣ್ಯ ಹೆಬ್ಬಾಗಿಲು, ಭಜನಾ ಪರಿಷತ್ ಗೌರವಾಧ್ಯಕ್ಷ ರಘುರಾಮ ಕೆ.ಪೂಜಾರಿ, ಉದ್ಯಮಿಗಳಾದ ಡಾ.ಗೋವಿಂದ ಬಾಬು ಪೂಜಾರಿ, ಸುರೇಶ ಶೆಟ್ಟಿ ಸೂರ‌್ಕುಂದ, ನೆಲ್ಯಾಡಿ ದಿವಾಕರ ಶೆಟ್ಟಿ, ಶ್ರೀ ಸೇನೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ್ ಬೈಂದೂರು, ಯು.ಸಂದೇಶ ಭಟ್, ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ಇದ್ದರು. ಪ್ರತಿಷ್ಠಾನದ ಸಂಚಾಲಕರಾದ ಸುಬ್ರಹ್ಮಣ್ಯ ಉಪ್ಪುಂದ ಸ್ವಾಗತಿಸಿ, ಅರುಣಕುಮಾರ್ ಶಿರೂರು ಕಾರ್ಯಕ್ರಮ ನಿರ್ವಹಿಸಿದರು.