ಜಿಲ್ಲೆ

ಗುಣಮಟ್ಟದ ಶಿಕ್ಷಣ ನೀಡಲು ಆದ್ಯತೆ ನೀಡಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಕುಂದಾಣ
ಬಡಮಕ್ಕಳು ಹೆಚ್ಚಿನದಾಗಿರುವ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಶಿಸ್ತು, ಸ್ವಚ್ಛತೆ ಬಗ್ಗೆಯೂ ತಿಳಿಹೇಳಬೇಕು ಎಂದು ಕನ್ನಮಂಗಲ ಗ್ರಾಪಂ ಅಧ್ಯಕ್ಷೆ ಪೂಜನಹಳ್ಳಿ ಗೌರಮ್ಮಮೂರ್ತಿ ಹೇಳಿದರು.
ಹೋಬಳಿಯ ಇಲತೊರೆಯಲ್ಲಿ ಹಮ್ಮಿಕೊಂಡಿದ್ದ ಇ-ಸ್ವತ್ತು ತೆರಿಗೆ ಅದಾಲತ್ ಆಂದೋಲನದ ವೇಳೆ ಸರ್ಕಾರಿ ಶಾಲೆಯ ಮಕ್ಕಳಿಗೆ ನೀಡಿದ ಬಿಸಿಯೂಟ ಪರಿಶೀಲಿಸಿ ಮಾತನಾಡಿದರು.
ಗ್ರಾಪಂ ಉಪಾಧ್ಯಕ್ಷ ಸಾದಹಳ್ಳಿ ಎಸ್.ಜಿ.ವೆಂಕಟಸ್ವಾಮಿ ಮಾತನಾಡಿ, ಗ್ರಾಪಂಗೆ ಆದಾಯ ಮೂಲ ಹೆಚ್ಚಿಸಿಕೊಳ್ಳಲು ಕಂದಾಯ ವಸೂಲಿಗೆ ಆದ್ಯತೆ ನೀಡಿದ್ದು, ಸಾರ್ವಜನಿಕರು ಸಹಕಾರ ನೀಡುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು ಎಂದರು.
ಪಂಚಾಯಿತಿ ಸದಸ್ಯರಾದ ಎಸ್.ಜಿ.ಮಂಜುನಾಥ್, ವಿನೋದ ಮಂಜುನಾಥ್, ವನಜಾಕ್ಷಮ್ಮ, ಶ್ರೀನಾಥ್, ಮಾಜಿ ಸದಸ್ಯ ಚನ್ನಕೇಶವ, ಗ್ರಾಮಸ್ಥರಾದ ಶ್ರೀನಿವಾಸ್, ಮುನಿರಾಜು, ಮೂರ್ತಿ, ಪಿಡಿಒ ಶ್ರೀನಿವಾಸ್, ಶಾಲಾ ಮುಖ್ಯಶಿಕ್ಷಕಿ ಜಯಂತಿ, ಸಿಬ್ಬಂದಿ ಶೋಭಾ, ರತ್ನಮ್ಮ, ಗಂಪಲಮ್ಮ ಮುಂತಾದವರಿದ್ದರು.