ಜಿಲ್ಲೆ

ಮಳಲಿ ಗ್ರಾಪಂ ಅಧ್ಯಕ್ಷೆಯಾಗಿ ಲಕ್ಷ್ಮೀ ಆಯ್ಕೆ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಕುಂದಗೋಳ: ತಾಲೂಕಿನ ಮಳಲಿ ಗ್ರಾಮ ಪಂಚಾಯಿತಿ ಎರಡನೇ ಅವಧಿಗೆ ಅಧ್ಯಕ್ಷೆಯಾಗಿ ಲಕ್ಷ್ಮೀ ಗೂಳಪ್ಪ ಕಳ್ಳಿಮನಿ ಹಾಗೂ ಉಪಾಧ್ಯಕ್ಷರಾಗಿ ಗುರು ಪಾಟೀಲ ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ಎನ್. ಅಜಯ್ ಅವಿರೋಧ ಆಯ್ಕೆ ಘೋಷಿಸಿದರು. ನೂತನ ಅಧ್ಯಕ್ಷೆ ಮಾತನಾಡಿ, ಗ್ರಾಮದ ಗುರು-ಹಿರಿಯರನ್ನು ಮತ್ತು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಳಲಿ, ಕುಂಕೂರ, ತೀರ್ಥ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು. ಉಪಾಧ್ಯಕ್ಷ ಗುರು ಪಾಟೀಲ ಮಾತನಾಡಿ, ಮೂರು ಗ್ರಾಮಗಳ ಸದಸ್ಯರು ನಮ್ಮ ಮೇಲೆ ವಿಶ್ವಾಸ, ನಂಬಿಕೆ, ಇಟ್ಟು ಮಹತ್ತರ ಜವಾಬ್ದಾರಿ ವಹಿಸಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮೂರೂ ಗ್ರಾಮಗಳ ಸಮಗ್ರ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸುತ್ತೇನೆ ಎಂದರು. ಗ್ರಾಪಂ ಸದಸ್ಯ ಎಂ.ಡಿ. ಬಡಿಗೇರ, ಮಂಜುನಾಥ ದೊಡ್ಡಗೌಡ್ರ, ಶಿವಲಿಂಗಪ್ಪ ಹಾದಿಮನಿ, ಚನ್ನವ್ವ ಕಲ್ಲಪ್ಪ ಸಂಶಿ, ಪಿಡಿಒ ನಾಗರಾಜ ಉಳ್ಳೆಸೂರ ಇದ್ದರು.