ಜಿಲ್ಲೆ

ಅಂಧತ್ವ ನಿವಾರಣೆಗೆ ಕಣ್ಣು ತಪಾಸಣೆ ಅಗತ್ಯ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಕುಂದಾಣ
ದೃಷ್ಟಿ ಸಮರ್ಪಕವಾಗಿದ್ದರೆ ಇರುವ ಜಾಗದಲ್ಲೇ ಜಗತ್ತನ್ನು ಕಾಣಬಹುದು. ಆದ್ದರಿಂದ ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು ಎಂದು ಆಲೂರು -ದುದ್ದನಹಳ್ಳಿ ಗ್ರಾಪಂ ಅಧ್ಯಕ್ಷೆ ಗೌರಮ್ಮ ರಾಮಣ್ಣ ಹೇಳಿದರು.
ಹೋಬಳಿಯ ಆಲೂರು-ದುದ್ದನಹಳ್ಳಿಯಲ್ಲಿ ಸ್ಪಂದನ್‌ದೀಪ್ ೌಂಡೇಷನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಶಂಕರ ಕಣ್ಣಿನ ಆಸ್ಪತ್ರೆಯಿಂದ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
45 ವರ್ಷ ಆಸುಪಾಸಿನವರಲ್ಲಿ ಕಣ್ಣಿನ ಪೊರೆ ಪ್ರಕರಣ ಹೆಚ್ಚಾಗಿ ಕಂಡು ಬರುತ್ತದೆ. ಅಂಥವರನ್ನು ಗುರುತಿಸಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ನೀಡುವುದರಿಂದ ದೃಷ್ಟಿ ದೋಷ ನಿವಾರಣೆ ಸಾಧ್ಯ ಎಂದರು.
ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯ ಡಾ. ಕುಮಾರ್ ಮಾತನಾಡಿ, ನೇತ್ರದಾನ ಶ್ರೇಷ್ಠ ದಾನವಾಗಿದೆ. ಕಣ್ಣು ಜಗತ್ತು ನೀಡುವ ಪ್ರಮುಖ ಅಂಗವಾಗಿದೆ. ಮನುಷ್ಯ ಸತ್ತ ಮೇಲೆ ಕಣ್ಣು ದಾನ ಮಾಡುವುದರಿಂದ ಅಂಧರ ಬಾಳಲ್ಲಿ ಬೆಳಕಾಗಬಹುದು ಎಂದರು.
120 ಜನ ಕಣ್ಣಿನ ತಪಾಸಣೆ ಮಾಡಿಸಿಕೊಂಡಿದ್ದು, 20 ಜನಕ್ಕೆ ಶಸ್ತ್ರ ಚಿಕಿತ್ಸೆ ಅಗತ್ಯವಿದೆ. 55ಕ್ಕೂ ಹೆಚ್ಚು ಜನರಿಗೆ ಕನ್ನಡಕ ನೀಡಲಾವುದು ಎಂದರು.
ಆಲೂರು -ದುದ್ದನಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಕಾಂತ ಮುನಿರಾಜು, ಸದಸ್ಯ ರಘು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ತಿಮ್ಮಪ್ಪನಾಯಕ್, ಬಿಸಿ ಟ್ರಸ್ಟ್ ನೌಕರ ವಿಮಲ್ ಗೌಡ, ಶ್ರೀ ಮಂಜುನಾಥ ಸೇವಾ ಟ್ರಸ್ಟ್ ಅಧ್ಯಕ್ಷ ನರಸಿಂಹರಾಜು, ಉಪಾಧ್ಯಕ್ಷ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಮದುಸೂಧನ್, ನಿರ್ದೇಶಕ ರಾಘವೇಂದ್ರ ಪ್ರಸಾದ್, ಆರೋಗ್ಯ ಇಲಾಖೆ ಶುಶ್ರೂಷಕಿ ಅಕ್ಷಿತಾ ಇತರರು ಇದ್ದರು.