ಕೆರೂರ: ಕುಂಕುಮದಿಂದ ಹರಡುವ ಸುಗಂಧವು ದೇವಿ ಜಾಗೃತಗೊಳಿಸುವ ಪ್ರಭಾವಿ ಮಾಧ್ಯಮವಾಗಿದ್ದು, ದೇವರ ಪೂಜೆಯಲ್ಲಿ ಕುಂಕುಮಕ್ಕೆ ಅಗ್ರಸ್ಥಾನ ಸ್ಥಾನ ನೀಡಲಾಗಿದೆ ಎಂದು ರಾಮಭಟ್ಟ ಜೋಶಿ ತಿಳಿಸಿದರು.
ಪಟ್ಟಣದ ಬನಶಂಕರಿದೇವಿ ದೇವಸ್ಥಾನದಲ್ಲಿ ಮಂಗಳವಾರ ಲಲಿತ ಪಂಚಮಿಯ ಪ್ರಯುಕ್ತ ನಡೆದ ಕುಂಕುಮಾರ್ಚನೆ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.
ದೇವಿಯ ನಾಮಜಪ ಪಠಿಸುತ್ತ ಒಂದೊಂದು ಚಿಟಿಕೆಯಷ್ಟು ಕುಂಕುಮವನ್ನು ದೇವಿಯ ಚರಣಗಳಿಂದ ಪ್ರಾರಂಭಿಸಿ ದೇವಿಯ ತಲೆಯವರೆಗೂ ಅರ್ಪಿಸುವ ಕಾರ್ಯವೇ ಕುಂಕುಮಾರ್ಚನೆಯಾಗಿದ್ದು, ಕುಂಕುಮಾರ್ಚನೆಯಿಂದ ಮೂರ್ತಿಯಲ್ಲಿ ದೇವಗುಣ ಜಾಗೃತವಾಗುತ್ತದೆ ಎಂದು ತಿಳಿಸಿದರು.
ದಂಪತಿಗಳು ದೇವಿ ಮೂರ್ತಿಗೆ ಭಕ್ತಿಪೂರ್ವಕವಾಗಿ ಕುಂಕುಮ ಅರ್ಪಿಸಿದರು. ಕುಂಕುಮಾರ್ಚನೆಯಲ್ಲಿ ಭಾಗವಹಿಸಿದ ಭಕ್ತರಿಗೆ ಬನಶಂಕರಿದೇವಿಯ ಪಂಚಲೋಹದ ಮೂರ್ತಿ ನೀಡಲಾಯಿತು.
ದೇವಾಂಗ ಸಮಾಜದ ಅಧ್ಯಕ್ಷ ಸಂಕಣ್ಣ ಹೊಸಮನಿ, ಅರ್ಚಕ ಯಂಕಣ್ಣ ಗುಡಿಸಾಗರ, ಸುನಿಲ ಗುಡಿಸಾಗರ, ರಾಚೋಟೇಶ್ವರ ಕುದರಿ, ಬಸು ಸಣ್ಣಕ್ಕಿ, ಶಿವಪ್ಪ ಹೆಬ್ಬಳ್ಳಿ, ನಿಜಗುಣಿ ಹರದೊಳ್ಳಿ, ಲಕ್ಷ್ಮಣ ಗದ್ದನಕೇರಿ, ಹನುಮಂತ ಕುದರಿ, ಮಯೂರ ರೂಡಗಿ, ನವೀನ ಕ್ವಾಣ್ಣೂರ, ಬಸು ಚಿತ್ತರಗಿ, ಶ್ರೀಧರ ಲಂಗಟದ ಇತರರಿದ್ದರು.